ಎಚ್ಚರಗೊಳ್ಳಿ ಯುವಜನರೆ, ನಾsಡರಕ್ಷಣೆ

ಎಚ್ಚರಗೊಳ್ಳಿ ಯುವಜನರೆ, ನಾsಡರಕ್ಷಣೆ ನಮ್ಮ ಹೊಣೆ | ಜಡತೆಯ ತೊರೆದು ಭ್ರಮೆಯನು ಹರಿದು ಬದಲಿಸಬನ್ನಿ ವಿಶ್ವವನೇ ಕದಲಿಸ ಬನ್ನಿ ಪೃಥ್ವಿಯನೇ || ಪ || ಜಗವನೆ ಜಯಿಸಿದ ಸಂಸ್ಕೃತಿ ಎಮ್ಮದು ಎಂಬುದನೆಂದಿಗು ಮರೆಯದಿರಿ ಪಶ್ಚಿಮದಿಕ್ಕಿನ ಭೋಗಜಗತ್ತಿನ ಥಳುಕಿಗೆ ನೀವ್ ಬಲಿಯಾಗದಿರಿ ಅಂಧಾನುಕರಣೆಯ ಮಾಡದಿರಿ ನಾsಡರಕ್ಷಣೆ ನಮ್ಮ ಹೊಣೆ, ಬದಲಿಸಬನ್ನಿ ವಿಶ್ವವನೇ || 1 || ಐಕ್ಯವ ಮರೆತು ಸ್ವಾರ್ಥದಿ ಮೆರೆದು ನಾಡಿದು ದಾಸ್ಯಕೆ ಒಳಗಾಯ್ತು ಅರಿಗಳ ಕುಹಕದ ಸಂಚಿಗೆ ಸಿಲುಕಿ ತಾಯ್ನೆಲವೆಮ್ಮದು ಹೋಳಾಯ್ತು ಭಾರತಮಾತೆಗೆ ಗೋಳಾಯ್ತು ನಾಡರಕ್ಷಣೆ […]

Read More

ಎಚ್ಚರಗೊಳ್ಳಿ ಎಚ್ಚರಗೊಳ್ಳಿ

ಎಚ್ಚರಗೊಳ್ಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಸಿಂಹಗಳೇ | ಎಚ್ಚರಗೊಳ್ಳಿ ಎಚ್ಚರಗೊಳ್ಳಿ ದಿಗ್ವಿಜಯದ ವ್ರತಧಾರಿಗಳೇ          || ಪ || ಮುಚ್ಚಿದೆಯೈ ಶತಮಾನಗಳಿಂದ ಗರ್ಜನೆಗೈಯುವ ವದನ ಹೆಚ್ಚಿದೆ ಕೇಸರಿಗಳ ಸಾಮ್ರಾಜ್ಯದಿ ಅರಿಗಳ ನರಿಗಳ ಚಲನ ಕಿಚ್ಚಿಕ್ಕಲು ಕಾನನ ಸಂಪತ್ತಿಗೆ ಕಾದಿದೆ ಶತ್ರು ಸಮೂಹ ಅಚ್ಚರಿ ಇದು ವನರಾಜನಿಗೀಪರಿ ಮೈಮರೆವಿನ ವ್ಯಾಮೋಹ     || 1 || ಕವಿದಿರೆ ಗವಿಯೊಳು ಭೀಕರ ಕತ್ತಲು ಬೆಳಕಿಗದೆಲ್ಲಿದೆ ಸ್ಥಾನ? ರವಿಕಿರಣದ ನಿರ್ಗಮನವು ಸಾರಿದೆ ಭಾಸ್ಕರಗೆ ಅಪಮಾನ ಆವರಿಸಿತೆ ಆರ್ಭಟದಾಸ್ಥಾನದಿ ಭಯ […]

Read More