ಎಚ್ಚರಗೊಳ್ಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಸಿಂಹಗಳೇ | ಎಚ್ಚರಗೊಳ್ಳಿ ಎಚ್ಚರಗೊಳ್ಳಿ ದಿಗ್ವಿಜಯದ ವ್ರತಧಾರಿಗಳೇ || ಪ || ಮುಚ್ಚಿದೆಯೈ ಶತಮಾನಗಳಿಂದ ಗರ್ಜನೆಗೈಯುವ ವದನ ಹೆಚ್ಚಿದೆ ಕೇಸರಿಗಳ ಸಾಮ್ರಾಜ್ಯದಿ ಅರಿಗಳ ನರಿಗಳ ಚಲನ ಕಿಚ್ಚಿಕ್ಕಲು ಕಾನನ ಸಂಪತ್ತಿಗೆ ಕಾದಿದೆ ಶತ್ರು ಸಮೂಹ ಅಚ್ಚರಿ ಇದು ವನರಾಜನಿಗೀಪರಿ ಮೈಮರೆವಿನ ವ್ಯಾಮೋಹ || 1 || ಕವಿದಿರೆ ಗವಿಯೊಳು ಭೀಕರ ಕತ್ತಲು ಬೆಳಕಿಗದೆಲ್ಲಿದೆ ಸ್ಥಾನ? ರವಿಕಿರಣದ ನಿರ್ಗಮನವು ಸಾರಿದೆ ಭಾಸ್ಕರಗೆ ಅಪಮಾನ ಆವರಿಸಿತೆ ಆರ್ಭಟದಾಸ್ಥಾನದಿ ಭಯ […]