ಬೆಳಕಾಗಿ ನೀ ಬಂದೆ

ಬೆಳಕಾಗಿ ನೀ ಬಂದೆ ಧ್ಯೇಯದಾ ದಿಶೆ ತಂದೆ ನಿನ್ನ ಉಜ್ವಲ ಛಲಕೆ ಸಾಧನೆಯ ಹಿರಿಮೆ ಮಾಧವನೆ ನಿನ್ನೊಲುಮೆ ಪ್ರೇರಣೆಯ ಚಿಲುಮೆ || ಪ || ಜಾತಿ ಭೇದವ ಮರೆತು ಸಕಲ ಜನರೊಳು ಬೆರೆತು ಧ್ಯೇಯ ಪಥದೊಳು ನಡೆವ ಕಾಯಕದ ಕರೆಯಿತ್ತು ನಿನ್ನೊಳಿರೆ ಎನಿತೆನಿತೋ ಕಾರ್ಯಸೂಚಿಯ ಕುಲುಮೆ ಮಾಧವನೆ ನಿನ್ನೊಲುಮೆ ಪ್ರೇರಣೆಯ ಚಿಲುಮೆ || 1 || ಮಾತಿನಂತೆಯೆ ಕೃತಿಯು ಸರಳತೆಯ ನಡೆನುಡಿಯು ಅಂತರಾಳವ ಹೊಕ್ಕು ಮಾರ್ದನಿಪ ಮೃದು ನುಡಿಯು ನಾಡಸೇವೆಗೆ ಎರೆದೆ ನಿನ್ನ ತಪಸಿನ ಮಹಿಮೆ ಮಾಧವನೆ […]

Read More