ಪ್ರಾಣಪ್ರಿಯವೀ ನೆಲದ ಮಣ್ಣ ಕಣಕಣವೆಮಗೆ ಧನ್ಯತೆಯ ಮೂಲವದು ಹಿಂದುಜನಕೆ | ದೈನ್ಯದುಃಖ ಹತಾಶೆ ಸಂಕಟದ ಸಮಯದೊಳು ಧೈರ್ಯವನು ತುಂಬಿಹುದು ನೊಂದಮನಕೆ || ಪ || ಜಗದ ಹೃದಯವ ಗೆದ್ದು ಮೆರೆಯುತಿಹ ಹಿಮರಾಜ ತಲೆಎತ್ತಿ ನಿಂದಿಹನು ಎತ್ತರದಲಿ | ವಜ್ರಮುಕುಟ ಹಿಮಾದ್ರಿ ಪ್ರಲಯರುದ್ರಾಲಯವು ಭದ್ರಸೀಮೆಯು ನಮಗೆ ಉತ್ತರದಲಿ || 1 || ಸಗರಕುಲಜನ ಛಲಕೆ ಒಲಿದ ಸುರನದಿ ಗಂಗೆ ನಾಕದಮೃತವನ್ನು ಉಣಿಸುತಿಹಳು | ಬರದಿ ಬೆಂದಿಹ ನೆಲಕೆ ಜಲಧಾರೆ ಹರಿಸುತಲಿ ಭುವಿಯ ಬಾಯಾರಿಕೆಯ ತಣಿಸುತಿಹಳು || 2 || […]
ಖಿನ್ನತೆಯ ಕಳೆದಳಿಸಿ ಭಿನ್ನತೆಯ ಬದಿಗಿರಿಸಿ | ಧನ್ಯತೆಯ ಮಾರ್ಗದಲಿ ಸಾಗೋಣ ಬನ್ನಿ | ಧರೆಗೆ ಸೇವೆಯ ಪ್ರಭೆಯ ಬೀರೋಣ ಬನ್ನಿ || ಪ || ಎನಿತೊ ಜನ್ಮದ ಪುಣ್ಯಫಲವೆಮಗೆ ಲಭಿಸಿಹುದು ಗುರಿ ಇರದ ಜೀವನಕೆ ಹೊಸದಿಶೆಯು ದೊರೆತಿಹುದು ಗುರುಹಿರಿಯರಾದರ್ಶ ದಿವ್ಯ ಮೇಲ್ಪಂಕ್ತಿ ಬೆಂಬಲಕೆ ಇಹುದೆಮಗೆ ಸಂಘಟನೆಯ ಶಕ್ತಿ || 1 || ತರತಮವು ಇಲ್ಲದಿಹ ಸದೃಢ ಸಮಾಜವನು ಕೊರತೆ ಇನಿತೂ ಇರದ ಸಮೃದ್ಧ ದೇಶವನು ನಿರ್ಮಾಣಗೈಯುವುದೆ ಬಾಳಗುರಿಯಾಗಿರಲಿ ಕಷ್ಟವೆನಿತೇ ಬರಲಿ ಮುನ್ನಡೆವ ಛಲವಿರಲಿ || 2 || […]