ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ ಧೈರ್ಯ ಶೌರ್ಯ ಮೂಡಿಬರಲಿ, ಹರಸಿ ಕಳುಹು ತಾಯಿಯೇ || ಪ || ಅಡಿಯ ಮುಂದೆ ಇಡಲು ಸ್ವರ್ಗ, ಹಿಂದೆ ಘೋರ ನರಕವು ಹೆತ್ತ ಒಡಲ ಋಣವ ಸಲಿಸಲಿಂದು ಬಂದ ಭಾಗ್ಯವು ಹಾಡು ಸಮರಗೀತೆಯ ನೆನೆಯೊ ವೀರಗಾಥೆಯ ಭಾರತಿಗೆ ಜೈ, ಭಾರತಿಗೆ ಆರತಿಯು ಜೈ ಜೈ ಜೈ || 1 || ದೇಶಭಕ್ತಿ ಉಕ್ಕಿ ಹರಿದು ರಕ್ತ ಬೆಚ್ಚಗಾಗಲಿ ಕೊರೆವ ಹಿಮದ ರಾಶಿಯಲ್ಲು ಮೈಯ ಛಳಿಯು […]