ಉಜ್ವಲ ಮಹಿಮೆಯ ಕಣಕಣ ಪಡೆದಿಹ

ಉಜ್ವಲ ಮಹಿಮೆಯ ಕಣಕಣ ಪಡೆದಿಹ ಮಣ್ಣಿನ ಮಕ್ಕಳೆ ಮೇಲೇಳಿ ಮಾನವ್ಯತೆ ದೇವತ್ವದ ಧರಿಸಿದ ಚರಿತೆಯ ಮೂಡಲಿ ಮೈತಾಳಿ || ಪ || ತಿಮಿರವ ತುಳಿಯುತ ಪರಾನುಕರಣೆಯ ಬೆನ್ನಿಗೆ ಮೂಡಿಸಿ ಪದಚಿಹ್ನೆ ಆರಾಧಿಪ ಬನ್ನಿರಿ ಜ್ಞಾನ ಶೀಲ ಭಾರತದೇಕಾತ್ಮತೆಯನ್ನೆ ತಾಯ್ನೆಲದಭಿಮಾನದ ಶ್ರುತಿ ಹೊಮ್ಮಿಸಿ ಹೃದಯದ ಭೇರಿಯ ನುಡಿಸೇಳಿ || 1 || ಮೈಮನದೊಳಗಾಂತರ್ಯದ ಸ್ಫೂರ್ತಿಯು ಹರಿದವತರಿಸಲಿ ನವಯುಗವು ಜಡತೆಗೆ ಚೇತನ ತುಂಬುತ ಹೊಮ್ಮಲಿ ಭಾರತದತಿ ದಿವ್ಯತೆಯರಿವು ಆತ್ಮದ ಅಮರತ್ವವ ಅನುಭವಿಸುತ ಸ್ವದೇಶಕೊಳಿತನು ತರಲೇಳಿ || 2 || ಹೃದಯದೊಳುದಿಸುವ […]

Read More