ದೇಶ ಒಂದೆ ಧ್ಯೇಯ ಒಂದೆ ಭಾಷೆ ನೂರು ಭಾವ ಒಂದೆ ನನ್ನ ಹೆಮ್ಮೆಯ ನಾಡಿದು ಮನ ತಣಿಸೆ ಚೆಲುವ ಬೀಡಿದು || ಪ || ಸಿಂಧೂನದಿಯ ಮಣ್ಣಿನಿಂದ ಹಿಮಾಲಯದ ತಪ್ಪಲಲ್ಲೂ ಕಾಶ್ಮೀರದ ಕಣಿವೆಯಿಂದ ಕನ್ಯಾಕುಮಾರಿಯಲ್ಲೂ ಸೇವೆಯೆಂಬ ಯಜ್ಞದಲ್ಲಿ ಭಾರತಾಂಬೆಯ ಗೆಲುವಿಗಾಗಿ ಪ್ರಾಣರಾಷ್ಟ್ರಕೆ ಅರ್ಪಿತ ಬದುಕು ದೇಶಕೆ ಸಮರ್ಪಿತ || 1 || ಕೆಂಪು ಕಪ್ಪು ಮಣ್ಣಿದು ಹಸಿರು ಹೊತ್ತ ನಾಡಿದು ಗೌರಿ ಶಂಕರ ಶಿಖರವಿಹುದು ನೂರು ನದಿಯ ಭುವಿಯಿದು ಕೋಟಿ ದೇವರಿರುವರು […]