ಉತ್ತಿಷ್ಠ ಭಾರತ – ಕೋಟಿ ಹೃದಯ ಧಮನಿಗಳಲಿ

ಕೋಟಿ ಹೃದಯ ಧಮನಿಗಳಲಿ ಹರಿಯಲಿ ಬಿಸಿನೆತ್ತರು ರಾಷ್ಟ್ರರಕ್ಷೆಗಾಗಿ ದೀಕ್ಷೆ ತೊಟ್ಟು ದುಡಿಯಿರೆಲ್ಲರು ಕೋಟಿ ಹೃದಯ – ‘ಭಾವ-ರಾಗ’ ಮೇಳೈಸಲಿ ತಾಳಕೆ ಹನಿಗೂಡಿಸಿ, ದನಿಗೂಡಿಸಿ ಒಕ್ಕೊರಲಿನ ಗಾನಕೆ | ಅಸುರೆದೆಗಳು ಬಿರಿಯಲಿ | ಸುರಭಾವಗಳರಳಲಿ | ಎದ್ದೇಳಿರಿ, ಸಜ್ಜಾಗಿರಿ ! ಧರ್ಮಕೆ ಗೆಲುವಾಗಲಿ | ನವಿರೇಳಲಿ, ನಲಿವಾಗಲಿ ಭರತಾಂಬೆಯ ಉಸಿರಲಿ || ಋಷಿ-ಮಹರ್ಷಿ-ಸಾಧು-ಸಂತರುದಿಸಿ ಬಾಳಲಿಲ್ಲವೆ ? ಜ್ಞಾನ-ಭಕ್ತಿ-ಧರ್ಮ-ಕರ್ಮದೀಪ್ತಿ ಬೆಳಗಲಿಲ್ಲವೆ ? ಕಾವ್ಯ-ಗೀತ-ನೃತ್ಯಕಲೆಯ ತೈಲವೆರೆದರಲ್ಲವೆ ? ‘ವಿಶ್ವಭಾರತಿ’ಯನು ಬೆಳಗೆ ದೀಪ್ತವಾಯ್ತು ವಿಶ್ವವೆ | ಉಜ್ವಲ ಗತಸಿರಿಯಿದೆ | ಶೌರ್ಯದ ಸ್ಮೃತಿಯೆಮಗಿದೆ […]

Read More