ಓ ದಾರಿಗನೇ ಪ್ರಿಯ ನೇಹಿಗನೇ

ಓ ದಾರಿಗನೇ ಪ್ರಿಯ ನೇಹಿಗನೇ ಗೈಯುವ ಬಾ ನವಯುಗ ನಿರ್ಮಾಣ ಸಮಾಜದೇವತೆಗರ್ಪಿತವಾಗಲಿ ನಮ್ಮೆಲ್ಲ ತನು ಮನ ಧನ ಪ್ರಾಣ         || ಪ || ಹಿಡಿಕೂಳಿನ ಬರಿಗೋಳಿನ ಬಾಳಿಗೆ ಮಾರುವೆಯಾ ತನುಮನವನು ಗೆಳೆಯಾ ಪಶುಬಲದಿದಿರಿಗೆ ಅಡಿಯಾಳಾಗುತ ಮರೆಯುವೆಯಾ ಮಾನವ್ಯದ ಗುರಿಯಾ?    || 1 || ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೊ ಮಾನವ ಜೀವನದನಂತ ಮಹಿಮೆ ಬಿಸಿಯಾರುವ ಮೊದಲೇ ಜಗವರಿಯಲಿ ನಿನ್ನಯ ಪವಿತ್ರ ರಕ್ತದ ಹಿರಿಮೆ           || 2 || […]

Read More