ಮನುಕುಲದೇಳಿಗೆ ಸಾಧಿಸ ಹೊರಟೆವು ಪ್ರಭಾತ ಕಿರಣಗಳರಳಿಸುತ ಶೋಷಿತ ಪೀಡಿತ ದಲಿತ ಜನಾಂಗದ ಭಾಗ್ಯೋದಯವನು ನಿರ್ಮಿಸುತಾ || ಪ || ಮೈ ಬೆವರಿನ ಜಲಪಾತವ ಧುಮುಕಿಸಿ ಹೊನ್ನನು ಸೃಜಿಪೆವು ಮಣ್ಣಿನಲಿ ಕಗ್ಗಲ್ಲೊಳು ಸುರಪ್ರತಿಮೆಯ ನಿರ್ಮಿಸಿ ಹೂವರಳಿಸುವೆವು ಮುಳ್ಳಿನಲಿ ಸತತ ಪರಿಶ್ರಮ ಸುರಿಸುತ ನಡೆವೆವು ವೈಭವ ಶಿಖರಕೆ ಧಾವಿಸುತಾ || 1 || ಯಾರೊಬ್ಬರ ಬಾಯ್ತುತ್ತನು ಕಸಿವುದು ಸಲ್ಲದು ಬೇಕಿಲ್ಲವು ನಮಗೆ ನ್ಯಾಯಕೆ ನೀತಿಗೆ ಹೋರಾಡುತಲಿರುವೆವು ನಾವ್ ಕಡೆಯುಸಿರಿನವರೆಗೆ ನಮ್ಮಯ ಹಿತವನು ಪರಹಿತದೊಂದಿಗೆ ಬೆಸೆವೆವು ಸಮರಸ ಸಾಧಿಸುತ || 2 […]