ಪಡುಗಡಲಿನಾಚೆಯ ಭೋಗ ಪ್ರವಾಹದಲೆ ಎಡೆಬಿಡದೆ ದಡಗಳನು ಬಡಿಯುತಿಹುದು || ಪ || ಹುಡಗನಿವ ಮುದುಕನಿವ ಕಡು ಬಡವನೆನ್ನದೆಯ ಕೆಳ ಕೆಡಹಿ ತುಳಿದಾಡಿ ಕುಣಿಯುತಿಹುದು || 1 || ಭೋಗಕಿದೆ ಭೋರ್ಗರೆತ ಭೋಗವದು ಜಲಪಾತ ಅಂತ್ಯವರಿಯದ ಪಯಣ ಸತತ ಕೊರೆಯುತಿದೆ || 2 || ಸಲಿಲಕ್ಕೆಲ್ಲಿಯ ಸ್ಥೈರ್ಯ ಸ್ಥಿರತೆಯಿದೆ ಹಿಮನಗಕೆ ತ್ಯಾಗ ಸಂಸ್ಕøತಿ ನಮದು ಮೇರುಸ್ಥೈರ್ಯ || 3 || ಶತಕಗಳ ಇತಿಹಾಸ ಧೃತಿಗೆಡದ ಮೃದುಹಾಸ ವಿಷವೃತ್ತ ದಾಟುವೆವು ಅಚಲಧೈರ್ಯ || 4 || adana escort adıyaman […]
ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ಪ || ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 || ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ […]