ಎಚ್ಚೆತ್ತ ಭಾವದೊಳು ರಾಷ್ಟ್ರಸೇವೆಯಗೈಯೆ ದನಿಯಾಗು ಓ ಮನವೆ ನಾಡು ನುಡಿಗೆ ಎಲ್ಲರೊಳಗೊಂದಾಗು, ಎಲ್ಲರೊಳು ಹಿತವಾಗು ಕರವಿಡಿದು ಮುನ್ನಡೆಸು ತಾಯಗುಡಿಗೆ || ಪ || ಹುಟ್ಟು ಸಾವಿನ ನಡುವೆ ಬಡತನವು ಸಿರಿತನವು ಎನಿತೆನಿತೋ ವಿವಿಧತೆಯು ಬಾಳ ರಥಕೆ ಕಷ್ಟವೇನೇ ಬರಲಿ ಸುಖವು ಕಾದಿದೆ ಮುಂದೆ, ಧರ್ಮಸೂತ್ರವೆ ದಿಟವು ಧ್ಯೇಯ ಪಥಕೆ || 1 || ರಾಷ್ಟ್ರದೇಕತೆಯಲ್ಲಿ ಹಲವು ಭಾಷೆಗಳಿರಲು ಸಾಹಿತ್ಯ ಸಂಪದದ ಭಾವವೊಂದೇ ವಿಧ ವಿಧ ಪ್ರಕಾರಗಳ ಕೃತಿರೂಪಿ ಕಾಯಕಕೆ ಸಾಮರಸ್ಯವ ಬೆಸೆವ ಕನಸು ಒಂದೇ || 2 […]