ಸಮರಸ ಭಾವ ನಾಡಿನ ಜೀವ ಚೈತನ್ಯಮಯ ಅದರ ಪ್ರಭಾವ | ಅಳಿಸುತ ನೋವ ನಲಿವ ಬೆಳೆಸುವ ಬಣ್ಣಿಸಲಸದಳ ದಿವ್ಯ ಸ್ವಭಾವ || ಪ || ಸಪ್ತಸ್ವರಗಳ ಮೋಹಕ ಲಾಸ್ಯ ಸಾಮರಸ್ಯದ ರೋಚಕ ಭಾಷ್ಯ ತಪ್ತ ಹೃದಯಗಳ ಬೇಗೆ ತಣಿಸುವ ಸಂತೃಪ್ತಿಯ ಸವಿ ಸುಧೆಯ ಉಣಿಸುವ || 1 || ಸಾಮರಸ್ಯವೇ ಸೃಷ್ಟಿಯ ನಿಯಮ ಇದು ಮನುಜತ್ವಕೆ ಹೊಸ ಆಯಾಮ ಧರೆಯಲಿ ಸ್ವರ್ಗವ ಸೃಜಿಸುವ ಹಾದಿ ನವ ಭವಿತವ್ಯಕೆ ಭದ್ರ ಬುನಾದಿ || 2 || ಸಾಮರಸ್ಯದಿಂ ನಾಡಿಗೆ […]
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || ಪ || ತೋಟದಲ್ಲಿ ಹಲವು ಬಣ್ಣ ಬಣ್ಣ ಹೂಗಳು ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು ಹೂಗಳಂತೆ ಮತಗಳೆಲ್ಲ ಕಂಪು ಸೂಸಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || 1 || ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೇ ? ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೇ ಜಗದ ಸೃಷ್ಟಿಯಲ್ಲಿ ಜೀವ ಸುಖದಿ ಬಾಳಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || 2 || ಮಣ್ಣಿನಿಂದ ಆದ ಮಡಿಕೆ ಮಣ್ಣಿಗನ್ಯವೇ ? ಚಿನ್ನದಿಂದ […]
ಧ್ಯೇಯದಾ ಹಾದಿಗೆ ಬಾಳ ನಡಿಗೆ ಸಾಗಿದೆ ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ || ಕರದಿ ಸಂಘಸೂತ್ರ ಹಿಡಿದು ಭರದಿ ಹಿಂದುತೇರನೆಳೆದು ತರತಮ ವಿಷ ಕಳೆಯ ಕೀಳಿ ಪರಕೀಯತೆ ಪದರ ಸೀಳಿ ಸಂಘಮಂತ್ರ ಜಪಿಸುತಾ ಬಂಧುಭಾವ ಬೆಳೆಸುತಾ || 1 || ಸ್ವಾರ್ಥ ಭಾವ ದೂರಗೊಳಿಸಿ ಕೀರ್ತಿಮೋಹ ಬದಿಗೆ ಸರಿಸಿ ಅರಳಿಸುತಲಿ ಶುದ್ಧ ಶೀಲ ಅರ್ಪಿಸುತಲಿ ಬದ್ಧ ಬಾಳ ಬನ್ನಿ ತಾಯಸೇವೆಗೆ ಉರಿಸಿ ಕಾಯ ದೀವಿಗೆ || 2 || ವ್ಯಕ್ತಿ ವ್ಯಕ್ತಿಗಳನು […]