ಸರ್ವ ಸುಂದರ ನಾಡು ವೀರವರ್ಯರ ಬೀಡು ಕರ್ಮಭೂಮಿಯ ನೋಡು ಭಾರತದೊಳಿಲ್ಲಿ || ಪ || ಸಾಗರದ ಅಂಚಿನಲಿ ಹಿಮಗಿರಿಯ ಪಾದದಲಿ ದಿವ್ಯ ಭೂಭಾಗವಿದು ಮೆರೆಯುತಿಹುದಿಲ್ಲಿ || 1 || ಪುಣ್ಯನದಿಗಳ ತಟದಿ ಭವ್ಯದೇಗುಲ ನೆಲೆಸಿ ಸರ್ವಶಕ್ತಿಯ ರೂಪ ಬೆಳಗುತಿಹುದಿಲ್ಲಿ || 2 || ವೇದ ಘೋಷವ ಗೈವ ಋಷಿವರ್ಯರಾಶ್ರಮವು ಸಾಧು ಸಂತರ ಬಾಳ್ವೆ ಸಾಗುತಿಹುದಿಲ್ಲಿ || 3 || ಸೌಜನ್ಯದಾ ಪುಷ್ಪ ಘಮಘಮಿಸಿ ಸೂಸಿರಲು ಸೌಹಾರ್ದದಾ ಎಲರು ಬೀಸುತಿಹುದಿಲ್ಲಿ || 4 || ವಿಶ್ವಶಾಂತಿಯ ನಾದ ಜಗಕೆಲ್ಲ […]