ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ ನನ್ನಲ್ಲೂ ನೆಲಸ ಬನ್ನಿ ಜಗದಗಲ ಭಿತ್ತಿಯಲಿ ಭಾರತಿಯನೆತ್ತರಿಪ ಕಾಯಕವ ಕಲಿಸ ಬನ್ನಿ || ಪ || ಋಷಿಯವನು ನಡೆದಿದ್ದ ಸ್ಥಿರಪಥವ ಹಿಡಿದಿದ್ದ ಗುರಿಯೆಡೆಗೆ ನೆಟ್ಟ ದೃಷ್ಟಿ ಕೇಶವನು ಕಲಿಸಿದ್ದ ಸಂಘಸೂತ್ರದಿ ಹೆಣೆದ ಯುವ ಮನವ ಮುಟ್ಟಿ ತಟ್ಟಿ ಅವನ ಕಾರ್ಯದ ತುಡಿತ ಸರ್ವಸ್ಪರ್ಶದ ಮಿಡಿತ ನನ್ನಲ್ಲೂ ನೆಲೆಸ ಬನ್ನಿ || 1 || ದೇಶ ಒಡೆದಾ ಗಳಿಗೆ ನಡೆದೆ ನೊಂದೆಡೆ ಬಳಿಗೆ ಸಂತ ಸಂತೈಸಿ ನಿಂತ ಸಂಘ ಮುರಿವ ತಂತ್ರಗಳಿಗೆ ಹಿಡಿದ […]
ಭಾರತದ ಪ್ರಾಚೀನ ಪ್ರತಿಭೆಯೆಮ್ಮೊಡನೆ ಮಾತನಾಡಿದ ಜಿಹ್ವೆ ಈತನದು || ಪ || ಸದಮಲ ಸಂಸ್ಕೃತಿಯದೆಮ್ಮೊಡನೆ ನಡೆದೈದ ದಿವ್ಯ ಅಡಿದಾವರೆಗಳೀತನದು || 1 || ಹೌತಾತ್ಮ್ಯದೌನ್ನತ್ಯವೆಮಗಿತ್ತ ಪ್ರೇರಣೆಯ ಆದರ್ಶ ಬಾಳುವೆಯು ಈತನದು || 2 || ಭವ್ಯ ಭವಿತವ್ಯವದು ಅಸುವಾಂತು ನೆಗೆದೆದ್ದ ಮಹಾನ್ಮರಣವೂ ಈತನದೆ ! || 3 || ಎಮ್ಮೊಳಗೆ ಶತಲಕ್ಷ ಪದಧಾರಿಯಿಂದಿಗು ವರ ವಿಶ್ವಸಂಚಾರಿಯೀತ || 4 || ಲಕ್ಷೋಪಲಕ್ಷ ಭುಜಧಾರಿ ಕೆಚ್ಚೆದೆಯ ಕಲಿ ಶತವಿಘ್ನಸಂಹಾರಿಯೀತ || 5 || ಎಮ್ಮದೀ ದಿನದಿನದ ಸಮ್ಮೇಳನದ ಸುಮದಿ […]