ಶೌರ್ಯ ಬಿತ್ತಿ ಬೆಳೆದ ಧನ್ಯ ವಿಶ್ವವಂದ್ಯೆ ಭಾರತಮಾತೆ ಕಾರ್ಯಶೀಲರಾಗುವಂತೆ ಹರಸು ನಮ್ಮನು ಅರಿಗಳಿಗೆ ದುರ್ಗೆಯಾಗಿ ಆರ್ತರಳಲ ತೊಡೆದ ತಾಯಿ ಧ್ಯೇಯ ಪಥದಿ ಸಾಗುವಂತೆ ಹರಸು ನಮ್ಮನು || ಪ || ವರ್ತಮಾನವಳಿಸಿಕೊಂಡು ಶೈತ್ಯ ಧಗೆಗೆ ಒಗ್ಗಿಕೊಂಡು ಹೊರಗೂ ಒಳಗೂ ಕಾಯುತಿರುವ ವೀರ ಯೋಧರು ಪೊರೆದು ಕಾಯ್ವ ವೀರರನ್ನು ಹೆಮ್ಮೆಯಿಂದ ವಿರತ ಸ್ಮರಿಸಿ ಹೃದಯವಂತರಾಗುವಂತೆ ಹರಸು ನಮ್ಮನು || 1 || ಒಡಕಿನಿಂದ ತೊಡಕು ಸಹಜ ಐಕ್ಯಮತ್ಯದಿಂದ ವಿಜಯ ಕೂಡಿ ಬಾಳ್ವ ಪರಿಯ ಕಲಿಸಿ ಹರಸು ನಮ್ಮನು ಸಗ್ಗ […]
ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ ಭರತಮಾತೆ ಕರೆಯುತಿಹಳು ಓಗೊಡುತ ಬಾರಾ ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ? ತಾಯ ಬಂಧ ಬಿಡಿಸುವಂದು ತೋರಿದಂಥ ಧೈರ್ಯ? || ಪ || ಚಲಿಸಲಿಲ್ಲ ಹಿಮದಗಿರಿಯ ಅಚಲ ನಿಂತ ನಿಲುವು ನಿಲ್ಲಲಿಲ್ಲ ಕಡಲ ಮೊರೆತ, ಕ್ಷಣವು ಇಲ್ಲ ಬಿಡುವು ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನ ನೀಡಿ ನಿನ್ನ ಮನವದೇಕೆ ಬದಲು – ಯಾರ ಮಂತ್ರ ಮೋಡಿ? || 1 || ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ ದರ್ಪ […]