ನೋಡಿದೆಯಾ ಭರತಸುತ

ನೋಡಿದೆಯಾ ಭರತಸುತ ಭಾರತದ ಬಾನಿನಲಿ ಭಾಗ್ಯರವಿ ತಾನುದಿಸಿ ಬರುತಲಿಹುದ ವರುಷ ಸಾಸಿರದಿಂದ ಬಂದಿರುವ ಭಿನ್ನತೆಯ ಕಲುಷಗಳ ಕಾರ್ಮುಗಿಲ ಕಳೆದು ಬೆಳಗುತಲಿ || ಪ || ಹೃದಯದಲಿ ಕುದಿರಕ್ತ ಮನಕೇಕೆ ಮುದಿತನವು ಹದಗೊಳಿಸು ಮೈಮನವ ಕದನದಂಕಣಕೆ ನಾಯಕನು ನೀನಾಗು ಸಾಯಕಂಗಳ ಧರಿಸು ಕಾಯವನು ಕಾಯಕಕೆ ಅಣಿಗೊಳಿಸು ಎನುತ || 1 || ಸ್ಫುರಣಗೊಳ್ಳಲಿ ಧೈರ್ಯ ಸ್ಥೈರ್ಯ ಬಲತೇಜಗಳು ಮರಣ ಮುಖನಂತಿರುವ ತರುಣ ನಿನ್ನೊಳಗೆ ಹರನಗೆಲಿದಿಹ ನರನ ವಾರಸಿಕೆ ನಿನಗಿಹುದು ಸ್ಮರಣೆಗೊಳ್ಳುತ ಕುವರ ಎದ್ದು ನಿಲ್ಲೆನುತ || 2 || […]

Read More

ಭಾರತದ ಯುವಜನತೆ ಸಿಡಿದೆದ್ದು

ಭಾರತದ ಯುವಜನತೆ ಸಿಡಿದೆದ್ದು ನಿಂತಿಹುದು ದೇವದುರ್ಲಭವೆನಿಪ ಸಂಘಶಕ್ತಿ || ಪ || ಧ್ಯೇಯ ಜಲಸಿಂಚನಕೆ ಕನಸೊಡೆದು ಮೇಲೆದ್ದು ಮೈ ಮರೆವಿನ ಪದರ ಕಿತ್ತುಬಿಸುಟು ಮುದುರಿರುವ ಗರಿಬಿಚ್ಚಿ ಗಗನಾಂಗಣಕೆ ಜಗದಗಲ ಸಂಚರಿಪ ಗರುಡನಂದದಲಿ || 1 || ತರತಮದ ಭೇದಗಳು ಅಳಿಸುತಲಿ ಜಸನದಲಿ ಬೆಸಯುತಲಿ ಮನಮನಕೆ ಭಾವಸಂಪರ್ಕ ಭಿನ್ನತೆಯ ಭಾರದಲಿ ಬಸವಳಿದ ಭಾರತಿಗೆ ಏಕರಸ ಧಾರೆಯಲಿ ಕಾಯಕಲ್ಪ || 2 || ಅಕ್ಷಯದ ಬತ್ತಳಿಕೆ ಶಿಶು ಬಾಲ ತರುಣ ಗಣ ಹೆದೆಯೇರ್ದ ಗಾಂಢಿವ ಪ್ರಾಢಗಢಣ ಗೋವು ಗ್ರಾಮದ ರಕ್ಷೆ […]

Read More

ನಮ್ಮದೆ ಎಂದಿಗೂ ಎಂದೆಂದಿಗೂ ನಮ್ಮದೆ

ನಮ್ಮದೆ ಎಂದಿಗೂ ಎಂದೆಂದಿಗೂ ನಮ್ಮದೆ ಭಾಗವಾದ ಭಾರತದ ಭೂಮಿಯೆಲ್ಲವೂ ಅದರೊಳಗೆ ಹುದುಗಿರುವ ಪ್ರಾಣವೆಲ್ಲವು ನಮ್ಮದೆ ಎಂದಿಗೂ ಎಂದೆಂದಿಗೂ ನಮ್ಮದೆ || ಪ || ದಶಮಿಯಂದು ಪೂಜಿಸಿಟ್ಟ ಖಡ್ಗ ಕರದಿ ಧರಿಸಿ ಅರಿಯ ರುಂಡಮುಂಡವೆಲ್ಲ ಕಾಳಿಪಾದ ಸೇರಿಸಿ ಸಮಾಜಕಡಲ ಸದ್ಭಾವವ ಜಾಗೃತಗೊಳಿಸಿ ಕ್ಷಾತ್ರ ಬಲದ ಇರುವಿಕೆಯ ಸತ್ಯ ಅರುಹಿಸಿ || 1 || ಶಿವಪ್ರತಾಪ ಧೀರಪಂಥ ಸೈನ್ಯವೇ ನಮದು ರಾಣಿ ಝಾನ್ಸಿ, ಚೆನ್ನಮ್ಮರ ಕುವರರು ನಾವು ತಾಯಮಮತೆ ಋಣಕೆ ಬಾಳ ಮುಡಿಪನಿಡುವೆವು ಧರ್ಮಕಾಗಿ ಸ್ವಾರ್ಥವನ್ನು ತೊರೆದುಬಿಡುವವು || 2 […]

Read More

ಏಕಾತ್ಮ ಭಾರತದ ಶತಕೋಟಿ ಕಾಯಗಳ

ಏಕಾತ್ಮ ಭಾರತದ ಶತಕೋಟಿ ಕಾಯಗಳ ಧಮನಿಯೊಳು ಉಕ್ಕುತಿಹ ನೆತ್ತರೊಂದೇ | ಹೃದಯದೊಳು ಸ್ಪಂದಿಸುವ ಭಾವ ಒಂದೇ || ಹಿಂದುತ್ವವೀ ನೆಲದ ಮೂಲಮಂತ್ರ .. ಈ ಪುಣ್ಯಭೂಮಿಗದೇ ಜೀವಯಂತ್ರ             || ಪ || ನಮ್ಮ ಪ್ರಾಚೀನತೆಯ ಶ್ರೇಷ್ಠತಮ ಸಂಸ್ಕೃತಿಯ ರವಿಕಿರಣ ವಿಶ್ವವನೆ ಬೆಳಗುತಿಹುದು ವಿವಿಧತೆಯೊಳೇಕತೆಯ ಸಮರಸದ ಸಂಹಿತೆಯ ಆದರ್ಶ ಜನಮನವ ಬೆಸೆಯುತಿಹುದು          || 1 || ಸುವಿಚಾರ ಬದ್ಧತೆಗೆ ಆಚಾರ ಶುದ್ಧತೆಗೆ ಭಾರತದೊಳಿಹುದೆಂದೂ ಅಗ್ರ ಪ್ರಾಶಸ್ತ್ಯ […]

Read More

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ ಭಾರತದ ಅಂಗಳದಲ್ಲಿ ಕೇಶವ ಉರಿಸಿದ ಸಂಘದ ಹಣತೆಯು ಬೆಳಗಿತು ಜನಮನ ಮನದಲ್ಲಿ || ಪ || ತನ್ನೀ ನೆಲಜಲ ಧರ್ಮಸಂಸ್ಕೃತಿ ಹಿಂದೂ ಜನತೆಯು ಮರೆತಿರಲು ದಾಸ್ಯದ ಉರುಳಿಗೆ ಕೊರಳನು ನೀಡಿ ಸ್ವಾರ್ಥದ ಕೂಪದಿ ಮುಳುಗಿರಲು ಘೋರ ನಿರಾಶೆಯ ಘನ ತಿಮಿರದಿ ತಾ ಯುವ ಜನತೆಯು ಎದೆಗುಂದಿರಲು ಕೇಶವ ತೋರಿದ ಧ್ಯೇಯದ ಗಾದಿ ಅಂತಿಮ ವಿಜಯದ ಹಾದಿಯೊಳು ಮಾತೆಯ ಸೇವೆಯ ಅನುದಿನ ಮಾಡಲು ಜೀವನವನೆ ಮುಡಿಪಾಗಿಡಲು || 1 || ಭಾರತದೇಶದ ಭವ್ಯಪರಂಪರೆ […]

Read More

ವರ ಭವ್ಯ ಭಾರತದ ನಿರ್ಭೀತ ಸಂತತಿಗೆ

ವರ ಭವ್ಯ ಭಾರತದ ನಿರ್ಭೀತ ಸಂತತಿಗೆ ಸಂಗ್ರಾಮ ಸಂಗೀತ ಹಾಡುವಾಸೆ ರಣಭೇರಿ ಕಹಳೆಗಳ ಘನ ಘೋರ ಗರ್ಜನೆಗೆ ನಲಿದು ನರ್ತಿಸು ಹೋರಾಡುವಾಸೆ || ಪ || ಮಾವನತೆಯುದ್ಧಾರ ಮಾತೃವೈಭವಕಾಗಿ ಬೆವರು ನೆತ್ತರ ಸುರಿಸಿ ದುಡಿಯುವಾಸೆ ದೇಶಹಿತ ಧರ್ಮಹಿತ ಸರ್ವಜಗಹಿತಕಾಗಿ ಕಲಿತನದಿ ಕಾದಾಡಿ ಮಡಿಯುವಾಸೆ || 1 || ಸವ್ಯಸಾಚಿಯ ತೆರದಿ ದಿವ್ಯಾಸ್ತ್ರಗಳ ಪಡೆದು ಮರಳಿ ಕುರುಕ್ಷೇತ್ರದೊಳು ನಿಲ್ಲುವಾಸೆ ಭೋರ್ಗರೆವ ಪಾಂಚಜನ್ಯದಾ ರಣಘೋಷವನು ಭೂಮಂಡಲದಿ ಬಿತ್ತರಿಸುವಾಸೆ || 2 || ಧ್ಯೇಯದೇವನ ಪದದಿ ಅರ್ಚನೆಯ ಹೂವಾಗಿ ಧನ್ಯತೆಯ ಸಂತೃಪ್ತಿ […]

Read More

ಭಾರತದ ಅಸ್ಮಿತೆಗೆ ಎರಗಿಹ ಸವಾಲುಗಳ

ಭಾರತದ ಅಸ್ಮಿತೆಗೆ ಎರಗಿಹ ಸವಾಲುಗಳ ಸ್ವೀಕರಿಸ ಬನ್ನಿರೋ ತರುಣ ಜನರೆ ಹೆಮ್ಮೆಯಿಂದೆದೆಯೆತ್ತಿ ನಮ್ಮದೀ ನೆಲವೆಂದು ಜಗಕೆ ಸಾರುವ ಬನ್ನಿ ಹಿಂದು ಜನರೆ || ಪ || ಮೇದಿನಿಯು ಮುಳುಗಿರಲು ಗಾಢಾಂದಕಾರದಲಿ ಜ್ಞಾನಜ್ಯೋತಿಯ ಬೆಳೆಗಿದಂಥ ನೆಲವು ಪರಕೀಯ ತತ್ವಗಳ ಅಂಧಾನುಕರಣೆಯಲಿ ಮೈಮರೆತು ಮಲಗಿದರೆ ಏನು ಫಲವು? || 1 || ಜಾತಿಮತಭೇದಗಳ ಬೇಲಿಗಳ ಕಿತ್ತೆಸೆದು ಏಕಪುರುಷನ ತೆರದಿ ಎದ್ದು ನಿಂದು ಭಿನ್ನತೆಯ ಬದಿಗಿರಿಸಿ ತನ್ನತವನು ಮೆರೆಸಿ ಹೊನ್ನಿನಂತಹ ನಾಡ ಕಟ್ಟಿರಿಂದು || 2 || ಗುಪ್ತಗಾಮಿನಿಯಂತೆ ನಾಡ ನಾಡಿಗಳಲ್ಲಿ […]

Read More

ಓ ಬೆಳಗಲಿಹುದದೋ

ಓ ಬೆಳಗಲಿಹುದದೋ ಭಾರತದ ಬಾನಂಚು ಸತ್ತುರುಳುತಿದೆ ನಿಶಾಸುರನ ಸಂಚು ಮೊಳಗುತಿದೆ ಸ್ಪೂರ್ತಿಯಲಿ ನೆಲದೊಕ್ಕೊರಲ ಕಂಚು ಅರಳುತಿದೆ ಪ್ರೇರಣೆಯ ಲತೆಯ ಮಿಂಚು                       || ಪ || ಭುವಿಯಾಳಕಿಳಿದಿಳಿದು ಬೇರುಗಳ ಬಾಯಿಂದ ನೆಲದೆದೆಯ ಪೀಯೂಷ ಪಡೆದು ಕುಡಿದು ಹೆಬ್ಬಂಡೆಗಳನೆಬ್ಬಿಸುವ ಹೆಮ್ಮರದ ಹಾಗೆ ಇಲ್ಲಿದೋ ಏಳುತಿದೆ ತರುಣಶಕ್ತಿ                              […]

Read More

ಅಭಿನವ ಭಾರತದ ನಿರ್ಮಾಣಕೆ

ಅಭಿನವ ಭಾರತದ ನಿರ್ಮಾಣಕೆ ಯುವಜನ ಶಕ್ತಿಯೆ ಆಧಾರ ಯುಗಗಳ ಕನಸಿಗೆ ಆಕಾರ… ನೀಡುವುದೆಮ್ಮಯ ನಿರ್ಧಾರ || ಪ || ಆಸೇತು ಹಿಮಾಚಲ ವಿಸ್ತಾರದ ತಾಯ್ನೆಲ ದೇವರ ವರದಾನ ಭಾರತ ಮಾತೆಯ ವೀರ ಸುಪುತ್ರರು ಎಂಬುವುದೆಮಗೆ ಅಭಿಮಾನ || 1 || ಋಷಿಮುನಿ ಸಂತರ ಕರ್ಮಭೂಮಿಯಿದು ಚತುರ್ವೇದಗಳ ತವರೂರು ಖಡ್ಗವ ಪಿಡಿದು ನಾಡಿನ ರಕ್ಷಣೆ ಗೈದಿಹ ಶೂರರ ನೆಲೆವೀಡು || 2 || ಆಧುನಿಕತೆಯ ವ್ಯಾಮೋಹದಲಿ ನಮ್ಮತನವನು ತೊರೆಯದಿರಿ ವಿಶ್ವಕೆ ದಾರಿಯ ತೋರಿದ ಭಾರತ ಎಂಬುದನೆಂದೂ ಮರೆಯದಿರಿ || […]

Read More