ಎಲೆಗಳು ನೂರಾರು ಭಾವದ ಎಲೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಒಂದೇ ಒಲವು ಸಾಗೋಣ ಒಟ್ಟಿಗೆ ಸಾಗೋಣ ನಾವು ನೀವು ಸೇರಿ ಒಂದಾಗಿ ನೀಗೋಣ ಭಿನ್ನತೆ ನೀಗೋಣ ಸಾವಿರ ಹೆಜ್ಜೆ ಒಂದೇ ಗುರಿಗಾಗಿ || 1 || ಕಿಡಿಗಳು ನೂರಾರು ಬೆಳಕಿನ ಕಿಡಿಗಳು ನೂರಾರು ಬೆಳಕಿನ ಪರಿಗೆ ಒಂದೇ ಹೆಸರು ಸೂರ್ಯ ಚಂದ್ರ ಲಾಂದ್ರ ಹಣತೆ ಅವುಗಳ ಹಿಂದೆ ಒಂದೇ ಘನತೆ ತೆರೆಯೋಣ ಹೃದಯ ತೆರೆಯೋಣ ನಾವು […]
ಸಮರಸ ಭಾವದ ಸರಿಗಮ ಸ್ವರದಲಿ ಹೊಸ ಹಾಡೊಂದನು ಹಾಡೋಣ ತರತಮವಿಲ್ಲದ ಸರಿಸಮ ಸೂತ್ರದಿ ಹೊಸ ನಾಡೊಂದನು ಕಟ್ಟೋಣ || ಪ || ಕುಡಿಯುವ ಜಲ ಉಸಿರಾಡುವ ಗಾಳಿ ನಡೆದಾಡುವ ನೆಲ ನಮಗೊಂದೇ ನಮ್ಮ ಶರೀರದ ಕಣಕಣಗಳಲಿ ಹರಿಯುವ ನೆತ್ತರು ತಾನೊಂದೇ || 1 || ಜಾತಿ ಭೇಧಗಳ ಮೇಲುಕೀಳುಗಳ ಬೇರು ಸಹಿತ ಕಿತ್ತೆಸೆಯೋಣ ಬಂಧುತ್ವದ ಭಾವೈಕ್ಯದ ನಂಟಲಿ ಹೃದಯ ಹೃದಯಗಳ ಬೆಸೆಯೋಣ || 2 || ಸೋಲು ಗೆಲುವುಗಳು ನೋವು ನಲಿವುಗಳು ಬದಲಿಸದಿರಲಿ ಬದ್ಧತೆಯ ರೋಷ ದ್ವೇಷಗಳ […]