ನವಭಾವ ನವಜೀವ ನವಶಕ್ತಿ

ನವಭಾವ ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿ ಏರಬೇಕು || ಪ || ಉನ್ನತೋನ್ನತ ಘನಹಿಮಾಗ್ರಿ ಶಿಖರವನೇರಿ ಹಾಡಲ್ಲಿ ಹಾಡಬೇಕು ಹಾಡು ನುಡಿಗುಂಡುಗಳು ಹಾರಿದಶದಿಕ್ಕಿನಲಿ ಭಯವಬೆನ್ನಟ್ಟಬೇಕು ಗಂಡೆದೆಯಘರ್ಜನೆಗೆ ಮೂಹತ್ತು ಮೂರ್ಕೋಟಿ ಕಲಕಂಠ ಬೆರೆಸಬೇಕೂ ಭೂಮ್ಯಾಂತರಾಳದಲಿ ನಭಚಕ್ರಗೋಳದಲಿ ಮಾರ್ದನಿಗಳೇಳಬೇಕು || 1 || ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ ಬಾನುಭುವಿ ಬೆಳಗಬೇಕು ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು ಅಳಿದುಳಿದ ಭವ್ಯತೆಯ ರುದ್ರ ಶಿಖೆಯುಜ್ವಲಿಸೆ ಹಾಡು ತಿದಿಯೊತ್ತಬೇಕೂ ದಿವಸ ದಿವಸಗಳಿಂದ ಮನದಿ ಮರುಗುತಲಿದ್ದ […]

Read More

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ      || ಪ || ತೋಟದಲ್ಲಿ ಹಲವು ಬಣ್ಣ ಬಣ್ಣ ಹೂಗಳು ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು ಹೂಗಳಂತೆ ಮತಗಳೆಲ್ಲ ಕಂಪು ಸೂಸಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ       || 1 || ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೇ ? ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೇ ಜಗದ ಸೃಷ್ಟಿಯಲ್ಲಿ ಜೀವ ಸುಖದಿ ಬಾಳಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ      || 2 || ಮಣ್ಣಿನಿಂದ ಆದ ಮಡಿಕೆ ಮಣ್ಣಿಗನ್ಯವೇ ? ಚಿನ್ನದಿಂದ […]

Read More

ಒಂದುಗೂಡಿ ಬೆರೆತುಕೊಂಡು

ಒಂದುಗೂಡಿ ಬೆರೆತುಕೊಂಡು ಬಂಧುಭಾವ ಬೆಳೆಸಿಕೊಂಡು ಒಕ್ಕೊರಳಲಿ ಕೂಗುವಾ… ತಾಯಿಗೆ ಜಯಘೋಷವ ತಾಯಿ ಭಾರತಿ… ನಿನಗೆ ಆರತಿ || ಪ || ವಿಶ್ವಕೆ ತಂಪೆಲರನಿತ್ತ ಸುಂದರ ವಟವೃಕ್ಷವು ಜ್ಞಾನದ ಸುಪ್ರಭೆಯನಿತ್ತು ಪ್ರಜ್ವಲಿಸುವ ಜ್ಯೋತಿಯು ಸಂಸ್ಕಾರದ ಸುಧೆಯ ಧಾರೆ ಹರಿವ ಮಹಾಸಲಿಲವು ವಿಶ್ವ ಪ್ರೇಮದಪ್ಪುಗೆಯಲಿ ಮಮತೆಯೀವ ನಾಕವು || 1 || ಬಾನೆತ್ತರವೇರಲಿ ಈ ಮಣ್ಣಿನ ಕೀರ್ತಿಯು ಭೂಮಂಡಲದಾಚೆಗೂ ಹಬ್ಬಲಿ ಜಯಗೀತೆಯು ಜನರೆದೆಯಲಿ ಅನುರಣಿಸಲಿ ದೇಶಭಕ್ತಿ ಗಾನವು ಮನದಲಿ ಮನೆ ಮಾಡಲಿ ಸ್ವಾಭಿಮಾನ ಮಂತ್ರವು ತಾಯಿ ಭಾರತಿ… ನಿನಗೆ ಆರತಿ […]

Read More

ಸಂಘಗಂಗೆಯ ಭಾವಜಲದಲಿ

ಸಂಘಗಂಗೆಯ ಭಾವಜಲದಲಿ ಮಿಂದು ಬಂದಿಹ ಯೋಧನೇ | ಕಾರ್ಯವದು ಕೈಬೀಸಿ ಕರೆದಿದೆ ತೋರು ನಿನ್ನಯ ಸಾಧನೆ || ಪ || ಧರ್ಮಪಥವಿದೆ ಕರ್ಮರಥವಿದೆ ರಥಕೆ ನೀನೇ ಸಾರಥಿ ವೇಗನಿನ್ನದು ವಾಘೆ ನಿನ್ನದು ಹರಸುತಿರುವಳು ಭಾರತಿ || 1 || ನಿಷೇಧದಂಚಿದೆ ವಿಧಿಯ ಮಾರ್ಗಕೆ ಚರಿತವಿರಚಿತ ಗುರುತಿದೆ ಬುದ್ಧಿ ತನುಮನ ತಿದ್ದಿ ತೀಡಲು ಗುರುವಿನೊಲವಿನ ಕೃಪೆ ಇದೆ || 2 || ಪೂರ್ವಜನ್ಮದ ಪುಣ್ಯ ನಿನ್ನದು ತೇರನೆಳೆಯುವ ಕಾಯಕ ಭರತಮಾತೆಯ ವಿಶ್ವವಿಜಯಕೆ ಸಮಯಕೊದಗಿಹ ಸೇವಕ || 3 ||

Read More

ಧ್ಯೇಯದಾ ಹಾದಿಗೆ ಬಾಳ ನಡಿಗೆ ಸಾಗಿದೆ

ಧ್ಯೇಯದಾ ಹಾದಿಗೆ ಬಾಳ ನಡಿಗೆ ಸಾಗಿದೆ ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ || ಕರದಿ ಸಂಘಸೂತ್ರ ಹಿಡಿದು ಭರದಿ ಹಿಂದುತೇರನೆಳೆದು ತರತಮ ವಿಷ ಕಳೆಯ ಕೀಳಿ ಪರಕೀಯತೆ ಪದರ ಸೀಳಿ ಸಂಘಮಂತ್ರ ಜಪಿಸುತಾ ಬಂಧುಭಾವ ಬೆಳೆಸುತಾ || 1 || ಸ್ವಾರ್ಥ ಭಾವ ದೂರಗೊಳಿಸಿ ಕೀರ್ತಿಮೋಹ ಬದಿಗೆ ಸರಿಸಿ ಅರಳಿಸುತಲಿ ಶುದ್ಧ ಶೀಲ ಅರ್ಪಿಸುತಲಿ ಬದ್ಧ ಬಾಳ ಬನ್ನಿ ತಾಯಸೇವೆಗೆ ಉರಿಸಿ ಕಾಯ ದೀವಿಗೆ || 2 || ವ್ಯಕ್ತಿ ವ್ಯಕ್ತಿಗಳನು […]

Read More