ಭಾರತದ ಯುವಜನತೆ ಸಿಡಿದೆದ್ದು ನಿಂತಿಹುದು ದೇವದುರ್ಲಭವೆನಿಪ ಸಂಘಶಕ್ತಿ || ಪ || ಧ್ಯೇಯ ಜಲಸಿಂಚನಕೆ ಕನಸೊಡೆದು ಮೇಲೆದ್ದು ಮೈ ಮರೆವಿನ ಪದರ ಕಿತ್ತುಬಿಸುಟು ಮುದುರಿರುವ ಗರಿಬಿಚ್ಚಿ ಗಗನಾಂಗಣಕೆ ಜಗದಗಲ ಸಂಚರಿಪ ಗರುಡನಂದದಲಿ || 1 || ತರತಮದ ಭೇದಗಳು ಅಳಿಸುತಲಿ ಜಸನದಲಿ ಬೆಸಯುತಲಿ ಮನಮನಕೆ ಭಾವಸಂಪರ್ಕ ಭಿನ್ನತೆಯ ಭಾರದಲಿ ಬಸವಳಿದ ಭಾರತಿಗೆ ಏಕರಸ ಧಾರೆಯಲಿ ಕಾಯಕಲ್ಪ || 2 || ಅಕ್ಷಯದ ಬತ್ತಳಿಕೆ ಶಿಶು ಬಾಲ ತರುಣ ಗಣ ಹೆದೆಯೇರ್ದ ಗಾಂಢಿವ ಪ್ರಾಢಗಢಣ ಗೋವು ಗ್ರಾಮದ ರಕ್ಷೆ […]
ಏಕಾತ್ಮ ಭಾರತದ ಶತಕೋಟಿ ಕಾಯಗಳ ಧಮನಿಯೊಳು ಉಕ್ಕುತಿಹ ನೆತ್ತರೊಂದೇ | ಹೃದಯದೊಳು ಸ್ಪಂದಿಸುವ ಭಾವ ಒಂದೇ || ಹಿಂದುತ್ವವೀ ನೆಲದ ಮೂಲಮಂತ್ರ .. ಈ ಪುಣ್ಯಭೂಮಿಗದೇ ಜೀವಯಂತ್ರ || ಪ || ನಮ್ಮ ಪ್ರಾಚೀನತೆಯ ಶ್ರೇಷ್ಠತಮ ಸಂಸ್ಕೃತಿಯ ರವಿಕಿರಣ ವಿಶ್ವವನೆ ಬೆಳಗುತಿಹುದು ವಿವಿಧತೆಯೊಳೇಕತೆಯ ಸಮರಸದ ಸಂಹಿತೆಯ ಆದರ್ಶ ಜನಮನವ ಬೆಸೆಯುತಿಹುದು || 1 || ಸುವಿಚಾರ ಬದ್ಧತೆಗೆ ಆಚಾರ ಶುದ್ಧತೆಗೆ ಭಾರತದೊಳಿಹುದೆಂದೂ ಅಗ್ರ ಪ್ರಾಶಸ್ತ್ಯ […]
ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ ಭಾರತದ ಅಂಗಳದಲ್ಲಿ ಕೇಶವ ಉರಿಸಿದ ಸಂಘದ ಹಣತೆಯು ಬೆಳಗಿತು ಜನಮನ ಮನದಲ್ಲಿ || ಪ || ತನ್ನೀ ನೆಲಜಲ ಧರ್ಮಸಂಸ್ಕೃತಿ ಹಿಂದೂ ಜನತೆಯು ಮರೆತಿರಲು ದಾಸ್ಯದ ಉರುಳಿಗೆ ಕೊರಳನು ನೀಡಿ ಸ್ವಾರ್ಥದ ಕೂಪದಿ ಮುಳುಗಿರಲು ಘೋರ ನಿರಾಶೆಯ ಘನ ತಿಮಿರದಿ ತಾ ಯುವ ಜನತೆಯು ಎದೆಗುಂದಿರಲು ಕೇಶವ ತೋರಿದ ಧ್ಯೇಯದ ಗಾದಿ ಅಂತಿಮ ವಿಜಯದ ಹಾದಿಯೊಳು ಮಾತೆಯ ಸೇವೆಯ ಅನುದಿನ ಮಾಡಲು ಜೀವನವನೆ ಮುಡಿಪಾಗಿಡಲು || 1 || ಭಾರತದೇಶದ ಭವ್ಯಪರಂಪರೆ […]
ವರ ಭವ್ಯ ಭಾರತದ ನಿರ್ಭೀತ ಸಂತತಿಗೆ ಸಂಗ್ರಾಮ ಸಂಗೀತ ಹಾಡುವಾಸೆ ರಣಭೇರಿ ಕಹಳೆಗಳ ಘನ ಘೋರ ಗರ್ಜನೆಗೆ ನಲಿದು ನರ್ತಿಸು ಹೋರಾಡುವಾಸೆ || ಪ || ಮಾವನತೆಯುದ್ಧಾರ ಮಾತೃವೈಭವಕಾಗಿ ಬೆವರು ನೆತ್ತರ ಸುರಿಸಿ ದುಡಿಯುವಾಸೆ ದೇಶಹಿತ ಧರ್ಮಹಿತ ಸರ್ವಜಗಹಿತಕಾಗಿ ಕಲಿತನದಿ ಕಾದಾಡಿ ಮಡಿಯುವಾಸೆ || 1 || ಸವ್ಯಸಾಚಿಯ ತೆರದಿ ದಿವ್ಯಾಸ್ತ್ರಗಳ ಪಡೆದು ಮರಳಿ ಕುರುಕ್ಷೇತ್ರದೊಳು ನಿಲ್ಲುವಾಸೆ ಭೋರ್ಗರೆವ ಪಾಂಚಜನ್ಯದಾ ರಣಘೋಷವನು ಭೂಮಂಡಲದಿ ಬಿತ್ತರಿಸುವಾಸೆ || 2 || ಧ್ಯೇಯದೇವನ ಪದದಿ ಅರ್ಚನೆಯ ಹೂವಾಗಿ ಧನ್ಯತೆಯ ಸಂತೃಪ್ತಿ […]
ಭಾರತದಾ ನವ ತರುಣರಂಗದಿ ಸತ್ಯ ಅಸತ್ಯದ ಸಮರ ಬೆಳೆದು ಹಿಂದು ಬಲ ಅಳಿದು ವಾಮಛಲ ಕರಗಲಿದೆ ಭ್ರಮೆ ತಿಮಿರ ಕೇಶವನಿರುವೆಡೆ ಧರ್ಮ ಧರ್ಮಕೆ ಜಯ ಯುಗ ನಿಯಮ || ಪ || ಶತಶತಮಾನದ ಮೌಢ್ಯದ ಗೋಡೆ ಒಡೆಯಲಿ ಅಳಿಸುತ ನೋವ ಕನಕ ಭಕ್ತಿಗೆ ಸಂಘ ಶಕ್ತಿಗೆ ಒಲಿಯುವ ಸಮಾಜ ದೇವಾ ಧ್ವನಿಸಲಿ ಹಿಂದೂ ಭಾವ ಪುನರುತ್ಥಾನ ಪುನರುಜ್ಜೀವನ ಗರ್ಭಗುಡಿಯ ಮಡಿಲಿಂದ ನವ ನಿರ್ಮಾಣದ ಪ್ರತಿ ಶಿಲೆಕಲ್ಲಿಗೂ ಸಮರಸ ಸೂತ್ರದ ಬಂಧ ಭೇದ ಬೆದರುವ ಸ್ವಾರ್ಥ ಕುತಂತ್ರ ಬಯಲಾಗುತ […]
ಭಾರತದ ಅಸ್ಮಿತೆಗೆ ಎರಗಿಹ ಸವಾಲುಗಳ ಸ್ವೀಕರಿಸ ಬನ್ನಿರೋ ತರುಣ ಜನರೆ ಹೆಮ್ಮೆಯಿಂದೆದೆಯೆತ್ತಿ ನಮ್ಮದೀ ನೆಲವೆಂದು ಜಗಕೆ ಸಾರುವ ಬನ್ನಿ ಹಿಂದು ಜನರೆ || ಪ || ಮೇದಿನಿಯು ಮುಳುಗಿರಲು ಗಾಢಾಂದಕಾರದಲಿ ಜ್ಞಾನಜ್ಯೋತಿಯ ಬೆಳೆಗಿದಂಥ ನೆಲವು ಪರಕೀಯ ತತ್ವಗಳ ಅಂಧಾನುಕರಣೆಯಲಿ ಮೈಮರೆತು ಮಲಗಿದರೆ ಏನು ಫಲವು? || 1 || ಜಾತಿಮತಭೇದಗಳ ಬೇಲಿಗಳ ಕಿತ್ತೆಸೆದು ಏಕಪುರುಷನ ತೆರದಿ ಎದ್ದು ನಿಂದು ಭಿನ್ನತೆಯ ಬದಿಗಿರಿಸಿ ತನ್ನತವನು ಮೆರೆಸಿ ಹೊನ್ನಿನಂತಹ ನಾಡ ಕಟ್ಟಿರಿಂದು || 2 || ಗುಪ್ತಗಾಮಿನಿಯಂತೆ ನಾಡ ನಾಡಿಗಳಲ್ಲಿ […]