ಭಾರತ ವರ್ಷದ ಭವ್ಯ ನವೋದಯ ಬಯಸಿದೆ ಶಕ್ತಿಯ ಸಂಗಮವ ದಾರಿಯ ತೋರಿದ ಧೀರ ಪರಂಪರೆ ಜಡತೆಯ ನೀಗಿದ ಜಂಗಮವ || ಪ || ಶ್ರದ್ಧೆಯ ಬದಲಿಪ ಬುದ್ಧಿ ಭೇದಗಳ ಸದ್ದಿಲ್ಲದ ಹುನ್ನಾರವಿದೆ ಇದ್ದುದನೆಲ್ಲವ ಅಲ್ಲಗಳೆವ ಹಸಿ ಸಿದ್ಧಾಂತದ ಸಂಘರ್ಷವಿದೆ || 1 || ಗಡಿಗಳ ಗುಡಿಗಳ ಒಡೆವಾಯುಧಗಳ ಮುರಿದಿಕ್ಕುವ ಛಲ ಮೂಡುತಿದೆ ಕಡಲಿನ ತಡಿ ಹಿಮಶಿಖರದ ನಡುವಿನ ಧರೆಯೊಡೆತನ ದೃಢವಾಗುತಿದೆ || 2 || ಸಾವಿರ ಕೈಗಳು ಒಗ್ಗೂಡಿಹ ಬಲ ಭಾವೈಕ್ಯದ ನೆಲೆಯಾಗಲಿದೆ […]
ದೇಶದುನ್ನತಿ ಅಲ್ಲಿ ನೆಲೆಸುವ ಜನರ ಶ್ರದ್ಧೆಯ ಬಯಸಿದೆ ದೇಶಸೇವೆಯೆ ಈಶ ಸೇವೆಯು ಎನುವ ಮನಗಳ ಕರೆದಿದೆ || ಪ || ಹುಲ್ಲು ಬೇರದು ನೀರು ನಿಲುಕಿದ- ರಲ್ಲೆ ಭುವಿಯಲಿ ಬೆಳೆವುದು ಹಸಿರ ಸೂಸುತ ತನ್ನಲಡಗಿಹ ಕಸುವ ಕಾಣಿರೋ ಎನುವುದು || 1 || ಬದುಕು ಸಾಗಿಸಲೊಂದು ದಾರಿಯು ದೊರೆವುದತಿ ಅನಿವಾರ್ಯವು ಕೆದುಕೆ ಬೂದಿಯ ಬುದ್ಧಿ ಅಗ್ನಿಯು ಉರಿದು ಬೆಳಗಲಿ ಧ್ಯೇಯವು || 2 || ಯುಕ್ತರಲಿ ಉಂಟೆಂದು ಬುದ್ಧಿಯು ಬುದ್ಧಿಯಿಂದಲೆ ಭಾವನೆ ಸೂಕ್ತ ರೀತಿಯ ಬಾಳ ಹಾದಿಯು […]