ಭರತ ಮಾತೆ ಭವ್ಯ ಮಂದಿರ ದ್ವಾರ ಬಳಿ ನಾ ನಿಂತಿಹೆ ಉದಿಸಿದ ನೇಸರನ ಜೊತೆಯಲಿ ಮಾತೃ ಚರಣಕೆ ನಮಿಸುವೆ || ಪ || ವಿಶ್ವದೆಲ್ಲೆಡೆ ಶಾಂತಿ ನೆಲೆಸಿದೆ ತಾಯಿ ಮಕ್ಕಳ ನಡುವಲಿ ಹಿಂದು ಸಂಸ್ಕೃತಿ ಬೆಳಕ ಹರಡಿದೆ ಜ್ಞಾನವನು ಪ್ರಜ್ವಲಿಸುತಲಿ || 1 || ಗೋವಿನ ಗುಣಗಾನ ಮಾಡುತ ಗ್ರಾಮ ನೃತ್ಯವು ನಡೆದಿದೆ ಸಮರಸತೆಯ ಸಹಜ ಭಾವವು ಎಲ್ಲ ಮನದಲಿ ನೆಲೆಸಿದೆ || 2 || ಭೇದಭಾವದ ಖಡ್ಗ ಮುರಿದಿದೆ ಒಂದೆ ಭಾವವು ಧ್ವನಿಸಿದೆ ಸೇವೆಯ ತ್ಯಾಗಜೀವನ […]
ಭವ್ಯ ಭಾರತದಲ್ಲಿ ಭವಿತವ್ಯಾ ಮಿನುಗುತಿದೆ ಭರವಸೆಯ ಹೊಂಗಿರಣ ಸೊಗವ ತಂದಿದೆ || ಪ || ನವ್ಯ ಸಾಧನೆ ಬೆಳಕು ಇತಿಹಾಸವ ನಿರ್ಮಿಸಿದೆ ಭುವಿಯ ಭಾಗ್ಯವಿದು ಎಂದು ಜಗವೇ ಮೆಚ್ಚಿದೆ || 1 || ಜಡತೆಯ ಕಿತತೊಗೆದು ಎಚ್ಚರಾಯಿತು ಈ ಜನತೆ ದಾಸ್ಯ ಭಾವವನೆಲ್ಲಾ ಕಿತ್ತು ಒಗೆದಿದೆ ವೀರ ಸಂತನ ಪಥದಿ ನಿಷ್ಠೆಯಲಿ ಸಾಗಿದೆ ತಾರತಮ್ಯವ ತೊರೆದು ಧ್ಯೇಯದಾ ಎಡೆಗೆ || 2 || ಪ್ರಗತಿಯ ಪಥದಲ್ಲಿಂದು ದಾಪುಗಾಲಿನ ಈ ನಡಿಗೆ ಸ್ವಾಭಿಮಾನವೆ ನಮಗೆ ವರವೇ ಆಗಿದೆ ಸ್ವಾರ್ಥಹಿತವ […]
ವರ ಭವ್ಯ ಭಾರತದ ನಿರ್ಭೀತ ಸಂತತಿಗೆ ಸಂಗ್ರಾಮ ಸಂಗೀತ ಹಾಡುವಾಸೆ ರಣಭೇರಿ ಕಹಳೆಗಳ ಘನ ಘೋರ ಗರ್ಜನೆಗೆ ನಲಿದು ನರ್ತಿಸು ಹೋರಾಡುವಾಸೆ || ಪ || ಮಾವನತೆಯುದ್ಧಾರ ಮಾತೃವೈಭವಕಾಗಿ ಬೆವರು ನೆತ್ತರ ಸುರಿಸಿ ದುಡಿಯುವಾಸೆ ದೇಶಹಿತ ಧರ್ಮಹಿತ ಸರ್ವಜಗಹಿತಕಾಗಿ ಕಲಿತನದಿ ಕಾದಾಡಿ ಮಡಿಯುವಾಸೆ || 1 || ಸವ್ಯಸಾಚಿಯ ತೆರದಿ ದಿವ್ಯಾಸ್ತ್ರಗಳ ಪಡೆದು ಮರಳಿ ಕುರುಕ್ಷೇತ್ರದೊಳು ನಿಲ್ಲುವಾಸೆ ಭೋರ್ಗರೆವ ಪಾಂಚಜನ್ಯದಾ ರಣಘೋಷವನು ಭೂಮಂಡಲದಿ ಬಿತ್ತರಿಸುವಾಸೆ || 2 || ಧ್ಯೇಯದೇವನ ಪದದಿ ಅರ್ಚನೆಯ ಹೂವಾಗಿ ಧನ್ಯತೆಯ ಸಂತೃಪ್ತಿ […]