ಒಂದುಗೂಡಿ ಬೆರೆತುಕೊಂಡು ಬಂಧುಭಾವ ಬೆಳೆಸಿಕೊಂಡು ಒಕ್ಕೊರಳಲಿ ಕೂಗುವಾ… ತಾಯಿಗೆ ಜಯಘೋಷವ ತಾಯಿ ಭಾರತಿ… ನಿನಗೆ ಆರತಿ || ಪ || ವಿಶ್ವಕೆ ತಂಪೆಲರನಿತ್ತ ಸುಂದರ ವಟವೃಕ್ಷವು ಜ್ಞಾನದ ಸುಪ್ರಭೆಯನಿತ್ತು ಪ್ರಜ್ವಲಿಸುವ ಜ್ಯೋತಿಯು ಸಂಸ್ಕಾರದ ಸುಧೆಯ ಧಾರೆ ಹರಿವ ಮಹಾಸಲಿಲವು ವಿಶ್ವ ಪ್ರೇಮದಪ್ಪುಗೆಯಲಿ ಮಮತೆಯೀವ ನಾಕವು || 1 || ಬಾನೆತ್ತರವೇರಲಿ ಈ ಮಣ್ಣಿನ ಕೀರ್ತಿಯು ಭೂಮಂಡಲದಾಚೆಗೂ ಹಬ್ಬಲಿ ಜಯಗೀತೆಯು ಜನರೆದೆಯಲಿ ಅನುರಣಿಸಲಿ ದೇಶಭಕ್ತಿ ಗಾನವು ಮನದಲಿ ಮನೆ ಮಾಡಲಿ ಸ್ವಾಭಿಮಾನ ಮಂತ್ರವು ತಾಯಿ ಭಾರತಿ… ನಿನಗೆ ಆರತಿ […]
ಸಂಘಗಂಗೆಯ ಭಾವಜಲದಲಿ ಮಿಂದು ಬಂದಿಹ ಯೋಧನೇ | ಕಾರ್ಯವದು ಕೈಬೀಸಿ ಕರೆದಿದೆ ತೋರು ನಿನ್ನಯ ಸಾಧನೆ || ಪ || ಧರ್ಮಪಥವಿದೆ ಕರ್ಮರಥವಿದೆ ರಥಕೆ ನೀನೇ ಸಾರಥಿ ವೇಗನಿನ್ನದು ವಾಘೆ ನಿನ್ನದು ಹರಸುತಿರುವಳು ಭಾರತಿ || 1 || ನಿಷೇಧದಂಚಿದೆ ವಿಧಿಯ ಮಾರ್ಗಕೆ ಚರಿತವಿರಚಿತ ಗುರುತಿದೆ ಬುದ್ಧಿ ತನುಮನ ತಿದ್ದಿ ತೀಡಲು ಗುರುವಿನೊಲವಿನ ಕೃಪೆ ಇದೆ || 2 || ಪೂರ್ವಜನ್ಮದ ಪುಣ್ಯ ನಿನ್ನದು ತೇರನೆಳೆಯುವ ಕಾಯಕ ಭರತಮಾತೆಯ ವಿಶ್ವವಿಜಯಕೆ ಸಮಯಕೊದಗಿಹ ಸೇವಕ || 3 ||