ನವ ಭಾರತ ಶಿಲ್ಪಿಗಳಾಗೋಣ ಹೊಸ ಬಾಳಿನ ಭಾಗ್ಯವ ಬರೆಯೋಣ || ಪ || ಗಂಗೆಯ ತಂದ ಭಗೀರಥನಂತೆ ವಿಷವನು ಉಂಡ ನಂಜುಂಡನಂತೆ ತಪವನು ಗೈದು ವಿಷವನ್ನು ಕುಡಿದು ಸಮಾಜ ದೇವಗೆ ಪ್ರಾಣವ ಎರೆದು || 1 || ಕಾಣುವ ಅರಿಗಳ ಅಟ್ಟುತ ಯೋಧರು ಕಾಣದ ವೈರಿಯ ಮೆಟ್ಟುತ ವೈದ್ಯರು ಕಾಯಕ ಯೋಗಿಯ ತರದಲಿ ರೈತರು ತಾಯಿಯ ಕಷ್ಟವ ತೊಳೆಯುತಲಿಹರು. || 2 || ನವ ಚೈತನ್ಯದ ನವ ಕುಸುಮಗಳು ಕಾಣುತ ಹೊರಟಿವೆ ನವ ಕನಸುಗಳು ಭಾರತ ಮಾತೆಯು […]
ಸಾಹಸದಿತಿಹಾಸವ ಬರೆಯೋಣ ಹೊಸಬಾಳಿನ ಹಾಳೆಯ ತೆರೆಯೋಣ || ಪ || ಭಾರತಮಾತೆಯ ಕುವರ ಕಿಶೋರರು ಬಂದು ಸೇರಿಹೆವು ಒಂದಾಗಿ ದೇಶ ಧರ್ಮಗಳ ಘನತೆಯ ಸಾರಲು ದುಡಿವೆವು ನುಡಿವೆವು ಒಂದಾಗಿ ಓ ಹಗಲುಗಳೇ, ಬಿಳಿ ಮುಗಿಲುಗಳೇ, ಸುಳಿಗಾಳಿಯ ಅಲೆಗಳೇ ಹರಸಿ ಬಂಧುತ್ವದ ಧ್ಯೇಯಾದರ್ಶಗಳೇ ಅಂತರಂಗವನು ಆವರಿಸಿ || 1 || ಧೈರ್ಯದ ಸ್ಥೈರ್ಯದ ಓ ಮೇರುಗಳೇ ಬೆಳೆಯಿರಿ ಭೀರುತೆಯನ್ನಳಿಸಿ ಸ್ನೇಹ ಸಲಿಲಗಳೇ ಜ್ಞಾನ ಸ್ರೋತಗಳೇ, ನಾಡಿ ನಾಡಿಯಲಿ ಸಂಚರಿಸಿ ನಾಳೆ ನಾಳೆಗಳು ಕಳೆದರು […]