ನಾಡನು ಕಟ್ಟಲು ಬನ್ನಿ ಅರಿಗಳ ಮೆಟ್ಟಲು ಬನ್ನಿ ಹೇಡಿತನವನು ಬಡಿದೋಡಿಸುತಾ ಗುರಿಯನು ಮುಟ್ಟಲು ಬನ್ನಿ || ಪ || ನಮ್ಮ ಪರಂಪರೆ ಇತಿಹಾಸ ಸಾಸಿರ ಸಂತರ ಸಂದೇಶ ಸ್ಫೂರ್ತಿಯ ಚಿಮ್ಮಿಸಿ ಶಕ್ತಿಯ ಹೊಮ್ಮಿಸಿ ಮೊಳಗಲಿ ಮಾತೆಯ ಜಯಘೋಷ || 1 || ಶೌರ್ಯ ಪರಾಕ್ರಮ ವರ್ಧನೆಗೆ ಧೈರ್ಯ ಸಾಹಸದ ವರ್ತನೆಗೆ ಸಂಘಶಕ್ತಿಯಿಂ ದೇಶಭಕ್ತಿಯಿಂ ರಾಷ್ಟ್ರದ ನಿಜ ಪರಿವರ್ತನೆಗೆ || 2 || ಸುತ್ತಲು ರಿಪುಗಳು ಮುತ್ತಿರಲು ವಿದ್ರೋಹವು ಹೆಡೆ ಎತ್ತಿರಲು ಜಡತೆಯ ತೊರೆದು ದೃಢತೆಯ ಮೆರೆದು ಅಂತಿಮ […]
ಖಿನ್ನತೆಯ ಕಳೆದಳಿಸಿ ಭಿನ್ನತೆಯ ಬದಿಗಿರಿಸಿ | ಧನ್ಯತೆಯ ಮಾರ್ಗದಲಿ ಸಾಗೋಣ ಬನ್ನಿ | ಧರೆಗೆ ಸೇವೆಯ ಪ್ರಭೆಯ ಬೀರೋಣ ಬನ್ನಿ || ಪ || ಎನಿತೊ ಜನ್ಮದ ಪುಣ್ಯಫಲವೆಮಗೆ ಲಭಿಸಿಹುದು ಗುರಿ ಇರದ ಜೀವನಕೆ ಹೊಸದಿಶೆಯು ದೊರೆತಿಹುದು ಗುರುಹಿರಿಯರಾದರ್ಶ ದಿವ್ಯ ಮೇಲ್ಪಂಕ್ತಿ ಬೆಂಬಲಕೆ ಇಹುದೆಮಗೆ ಸಂಘಟನೆಯ ಶಕ್ತಿ || 1 || ತರತಮವು ಇಲ್ಲದಿಹ ಸದೃಢ ಸಮಾಜವನು ಕೊರತೆ ಇನಿತೂ ಇರದ ಸಮೃದ್ಧ ದೇಶವನು ನಿರ್ಮಾಣಗೈಯುವುದೆ ಬಾಳಗುರಿಯಾಗಿರಲಿ ಕಷ್ಟವೆನಿತೇ ಬರಲಿ ಮುನ್ನಡೆವ ಛಲವಿರಲಿ || 2 || […]
ಅಖಂಡ ಹಿಂದು ಭಾರತ ಸಾಧನೆಗೊಂದುಗೂಡಿ ಬನ್ನಿ ಹೆಬ್ಬಯಕೆಯ ಸಾಧಿಸುವ ಹಾದಿಯಲಿ ಎಲ್ಲರೊಂದೆ ಎನ್ನಿ || ಪ || ಜಗತ್ತಿನೆಲ್ಲೆಡೆ ಸಾಕ್ಷಿಯಾಗಲಿದೆ ಭರತನಾಳಿದ ದೇಶ ಸಾಸಿರ ದಾಳಿಗೆ ಉತ್ತರವಿತ್ತ ವೀರಧೀರ ಸಂಘರ್ಷ ಹಿನ್ನಡೆಯಾಗಿದೆ ಸತ್ತಿಲ್ಲ ಮನೆ ಮನದೊಳಡಗಿದೆ ಹಿಂದುತ್ವ ಭೂಮಿ ಎಲ್ಲೆಡೆ ಪಾಲಿಸಬೇಕಿದೆ ಭಾರತೀಯ ಸತ್ವ ಮಾನವತೆಯ ತತ್ವ || 1 || ಸೋಲಿನ ಶೂಲಕೆ ಸಿಲುಕಿ ನರಳುವ ಹೇಡಿ ಜನಾಂಗವು ನಾವಲ್ಲ ಮೃತ್ಯುವಿನೆದೆಗೆ ಅಂತ್ಯ ಸಾರುವ ಧೀರ ಹೃದಯಗಳೇ ನಾವೆಲ್ಲ ಎಮ್ಮ ಪೂರ್ವಜರು ಕೊಡಲಿ ಎತ್ತಿದರೆ ತಲೆಬಾಗಿತ್ತು […]
ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ ಭಾರತಾಂಬೆ ಸೇವೆಗಾಗಿ ಮುಂದೆ ಸಾಗುತ || ಪ || ಆನಗಾದಿ ರಾಜ ಗೌರಿಶಂಕರ ಉನ್ನತುಂಗ ವಿಶ್ವರಿಪು ಭಯಂಕರ ಮಾನನೀಯ ಮಾನಸ ಸರೋವರ ಮರೆಯಲೆಂತು ಮಾತೃ ಭೂ ಮನೋಹರ || 1 || ಕುರಿಗಳಲ್ಲ ನಾವು ಕೇಸರಿಗಳು ಅರಿಯ ಶಿರವ ಮೆಟ್ಟಬಲ್ಲ ಕಲಿಗಳು ವೈರಿ ಕಾಲಿಡುತಿಹನು ಕಣ್ಣಕಾಣದೆ ಸುಮ್ಮನಿರುವೆ ಎಂತು ಅವನ ಮಣ್ಣುಮಾಡದೆ || 2 || ಮಡಿವ ಮುನ್ನ ಮಾಡು ಬಾಳು ಸಾರ್ಥಕ ಭರತಮಾತೆ ಮಡಿಲ ನಿತ್ಯ ಸೇವಕ ಮುಂದೆ ಮುಂದೆ […]
ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ ನನ್ನಲ್ಲೂ ನೆಲಸ ಬನ್ನಿ ಜಗದಗಲ ಭಿತ್ತಿಯಲಿ ಭಾರತಿಯನೆತ್ತರಿಪ ಕಾಯಕವ ಕಲಿಸ ಬನ್ನಿ || ಪ || ಋಷಿಯವನು ನಡೆದಿದ್ದ ಸ್ಥಿರಪಥವ ಹಿಡಿದಿದ್ದ ಗುರಿಯೆಡೆಗೆ ನೆಟ್ಟ ದೃಷ್ಟಿ ಕೇಶವನು ಕಲಿಸಿದ್ದ ಸಂಘಸೂತ್ರದಿ ಹೆಣೆದ ಯುವ ಮನವ ಮುಟ್ಟಿ ತಟ್ಟಿ ಅವನ ಕಾರ್ಯದ ತುಡಿತ ಸರ್ವಸ್ಪರ್ಶದ ಮಿಡಿತ ನನ್ನಲ್ಲೂ ನೆಲೆಸ ಬನ್ನಿ || 1 || ದೇಶ ಒಡೆದಾ ಗಳಿಗೆ ನಡೆದೆ ನೊಂದೆಡೆ ಬಳಿಗೆ ಸಂತ ಸಂತೈಸಿ ನಿಂತ ಸಂಘ ಮುರಿವ ತಂತ್ರಗಳಿಗೆ ಹಿಡಿದ […]
ಸೇವೆಯ ಸೇತುವೆ ಕಟ್ಟಲು ಬನ್ನಿ ವ್ಯಕ್ತಿ ಸಮಾಜದ ನಡುವೆ ನಾಡದೇವತೆಗೆ ಅರ್ಪಿಸಬನ್ನಿ ತನುಮನಧನಗಳ ಒಡವೆ || ಪ || ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ ಸ್ವಾರ್ಥದುರಾಶೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ ಕಂಗೆಡಿಸುವ ಕಗ್ಗತ್ತಲಕೂಪದಿ ಸೇವೆಯೆ ದಾರಿದೀಪ ದುಃಖಿತ ಜನತೆಯ ಕಂಬನಿಯೊರೆಸುವ ಕರುಣೆಯ ಮಾತೃಸ್ವರೂಪ || 1 || ಅಕ್ಷರವಿದ್ಯೆಯ ಕಲಿಸಿ ನಿರಕ್ಷುರಕುಕ್ಷಿಗಳಿಗೆ ಒಲವಿಂದ ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯೆ ಮಾರ್ಗ ತ್ಯಾಗ […]
ಭಾರ್ಗವನ ಬಾಹುಬಲ ಭುಜಕೋಟಿಗಳ ತುಂಬಿ ಭೋರ್ಗರೆಯುತಿಹುದಿಲ್ಲಿ ನೋಡ ಬನ್ನಿ ಸ್ವರ್ಗಸದೃಶ ಭವ್ಯ ಭಾರತವ ನಿರ್ಮಿಸುವ ಮಾರ್ಗದಲಿ ಯುವಜನರೆ ಸಾಗಿ ಬನ್ನಿ ಸಾಹಸದ ಇತಿಹಾಸ ರಚಿಸ ಬನ್ನಿ || ಪ || ಹಿಂದು ದೇಶದ ಹಿರಿಮೆ ಜಗಕೆಲ್ಲ ಸಾರುತಲಿ ಬಂಧುಭಾವದಿ ಬಾಳ ಧನ್ಯತೆಯ ಕಾಣುತಲಿ ಸಿಂಧು ಜಲಧಿಯಸಂಖ್ಯ ಬಿಂದುಬಿಂದುಗಳಂತೆ ಒಂದುಗೂಡುತ ಬಲವ ಹೊಂದ ಬನ್ನಿ || 1 || ದುಷ್ಟತೆಯ ಹೆಡೆಮೆಟ್ಟಿ ಭ್ರಷ್ಟತೆಯ ಬಡಿದಟ್ಟಿ ಕಷ್ಟಕಾರ್ಪಣ್ಯಗಳ ಕೋಟೆಯನು ಪುಡಿಗಟ್ಟಿ ಶ್ರೇಷ್ಠತಮ ಸಂಸ್ಕೃತಿಯ ಶ್ರೇಷ್ಠತೆಯ ಮೆರೆಯಿಸುತ ಅಷ್ಟ ದಿಕ್ಕುಗಳನ್ನು ಜಯಿಸ […]
ಕರವ ಜೋಡಿಸಬನ್ನಿ ಈ ರಾಷ್ಟ್ರ ಕಾರ್ಯದಲಿ ಸ್ವರವ ಕೂಡಿಸಬನ್ನಿ ಒಕ್ಕೊರಲ ಘೋಷದಲಿ ನವಯುಗದ ನಿರ್ಮಾಣ ಗೈವ ಶುಭ ಆಶಯಕೆ ಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು || ಪ || ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದು ತಾಯ್ನೆಲದ ಉನ್ನತಿಯ ಆದರ್ಶ ಗುರಿ ಇಹುದು ಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದು ವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು || 1 || ದಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲ ಆಳುವರಸರ ಕೃಪೆಯ ಆಸರೆಯ ಹಂಗಿಲ್ಲ ಕಠಿಣ ಅಗ್ನಿ ಪರೀಕ್ಷೆಗಳ ಗೆದ್ದು ಬಂದಿಹೆವು ಮರಣ ಕೂಪದಿ […]
ಒಂದುಗೂಡಿ ಬನ್ನಿ ನಾಡಸೇವೆಗೆ ಶುದ್ಧಮನದಿ ಶ್ರದ್ಧೆಯಿಂದ ಗೈವಪೂಜೆಗೆ ಬದ್ಧರಾಗಿ ದಿವ್ಯಧ್ಯೇಯ ಆದರ್ಶಕೆ ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ || ಪ || ನಮ್ಮ ಬೆವರು ರಕ್ತವ ತೈಲದಂತೆ ಎರೆಯುವಾ ನಾಡಗುಡಿಯ ಬೆಳಗಲು ಬತ್ತಿಯಂತೆ ಉರಿಯುವಾ ಕತ್ತಲನ್ನು ಕರಗಿಸಿ, ಸುತ್ತ ಬೆಳಕ ಮೂಡಿಸಿ ಮನದಿ ಮನೆಯ ಮಾಡಿದಂಥ ಮೌಢ್ಯವನ್ನು ತೊಲಗಿಸಿ || 1 || ಸುಮ್ಮನಿರದೆ ಕಾರ್ಯಕಾಗಿ ಸತತಕಾಯ ಸವೆಸುವಾ ಹೆಮ್ಮೆಯಿಂದ ಒಮ್ಮನದಲಿ ಗುರಿಯ ಕಡೆಗೆ ಚಲಿಸುವಾ ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ ವಿರೋಧಕೆಂದೂ ಬಗ್ಗದಂಥ ಗಟ್ಟಿತನವ ಗಳಿಸುವಾ || […]