ನೋಡಿದೆಯಾ ಭರತಸುತ ಭಾರತದ ಬಾನಿನಲಿ ಭಾಗ್ಯರವಿ ತಾನುದಿಸಿ ಬರುತಲಿಹುದ ವರುಷ ಸಾಸಿರದಿಂದ ಬಂದಿರುವ ಭಿನ್ನತೆಯ ಕಲುಷಗಳ ಕಾರ್ಮುಗಿಲ ಕಳೆದು ಬೆಳಗುತಲಿ || ಪ || ಹೃದಯದಲಿ ಕುದಿರಕ್ತ ಮನಕೇಕೆ ಮುದಿತನವು ಹದಗೊಳಿಸು ಮೈಮನವ ಕದನದಂಕಣಕೆ ನಾಯಕನು ನೀನಾಗು ಸಾಯಕಂಗಳ ಧರಿಸು ಕಾಯವನು ಕಾಯಕಕೆ ಅಣಿಗೊಳಿಸು ಎನುತ || 1 || ಸ್ಫುರಣಗೊಳ್ಳಲಿ ಧೈರ್ಯ ಸ್ಥೈರ್ಯ ಬಲತೇಜಗಳು ಮರಣ ಮುಖನಂತಿರುವ ತರುಣ ನಿನ್ನೊಳಗೆ ಹರನಗೆಲಿದಿಹ ನರನ ವಾರಸಿಕೆ ನಿನಗಿಹುದು ಸ್ಮರಣೆಗೊಳ್ಳುತ ಕುವರ ಎದ್ದು ನಿಲ್ಲೆನುತ || 2 || […]