ಹಿಂದುತ್ವದರಮನೆಯ ತೋರಣ

ಹಿಂದುತ್ವದರಮನೆಯ ತೋರಣ ಬಂಧುತ್ವದೆದೆದನಿಯ ಶ್ರವಣಾ ಶ್ರಾವಣದ ಪೂರ್ಣಿಮೆಯ ದಿನದ ರಕ್ಷಾಬಂಧನ || ಪ || ಸಂಸ್ಕೃತಿಯ ಸೌಧದಲಿ ಗೈದು ವೀರವ್ರತ ಸತ್ಕೃತಿಯ ಶಪಥ ಭಕ್ತಿಯಲಿ ಮುನ್ನಡೆದು ಬುವಿ ಬಾನ್ಗೆ ಕೈಮುಗಿದು ಹರಕೆ ಪಡೆದು ಪೌರುಷವನುರೆ ಮೆರೆಸಿ ತಾಯ್ನೆಲದ ಕಣಕಣದ ಋಣವ ಹರಿಸಿ ಮನುಜತೆಗೆ ದಿವ್ಯತೆಯ ತರಲಿದುವೆ ತೊಡಿರೈ ಅಮರ ಸೂತ್ರ || 1 || ಹಿಂದುಹಿಂದುವಿನೆದೆಯ ಒಂದುಗೂಡಿಸುವ ಈ ಸ್ನೇಹಸೂತ್ರ ಜನ್ಮಭೂಮಿಯ ಜನರ ರಕ್ಷಣಾಕವಚ ಕಾವಲಿನ ಶಸ್ತ್ರ ಅರಿಗೆಲ್ಲಿ ಇನ್ನುಳಿವು ಪಟುಭಟರೆ ನೀಡಿರೈ ಖಡ್ಗ ಹಸ್ತ ನೆಲದೊಲವನಿದೊ […]

Read More