ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ ಅಜ್ಞಾತವಾಸದಿಂದ ಗುಮ್ಮಟದ ಅಡಿಯಿಂದ ಧರ್ಮ ನ್ಯಾಯ ನೀತಿ ಉಳಿಸೆ ರಾಮನೆದ್ದು ಬಂದಾ ಅಯೇೂಧ್ಯ ನಗರಕೆ ಮತ್ತೆ ಬಂದಾ ನಮ್ಮ ಸ್ವಾಮಿ ಬಂದಾ ಶ್ರೀರಾಮಚಂದ್ರ ಪ್ರಭು ಬಂದಾ || ಪ || ಕಷ್ಟಕಾರ್ಪಣ್ಯವನು ಕೊನೆಗಾಣಿಸೆ ಬಂದಾ ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಲು ಶ್ರೀರಾಮ ಬಂದಾ ಕುಣಿಕುಣಿಯುತ ಬಂದಾ ನಲಿನಲಿಯುತ ಬಂದಾ ದೇವರದೇವ ಶ್ರೀರಾಮ ಬಂದಾ || 1 || ಢಮ ಢಮರು ನಾದದಲಿ ಘಂಟೆಯ ನಿನಾದಲಿ ಝೇಂಕರಿಸಿಹ ವೀಣೆಯಲಿ ಮೇೂಳಗುತಿಹ ಶಂಖದಲಿ […]
ಮಾನವತೆಯ ಮಂಥನಕ್ಕೆ ಉಡಿಸಿ ಬಂದ ಮಾಧವ ರಾಷ್ಟ್ರ ಯಜ್ಞದಗ್ನಿಯಲ್ಲಿ ಉರಿಸಿ ತನ್ನ ಕಾಯವಾ || ಪ || ದಣಿವರಿಯದ ಭರತ ಶಕ್ತಿ ಪರಿಧಿಯಿರದ ರಾಷ್ಟ್ರಭಕ್ತಿ ಈಶ ಕಾರ್ಯಕಾಗಿ ದುಡಿವ ಸ್ವಾರ್ಥರಹಿತ ವ್ಯಕ್ತಿಯಾಗಿ || 1 || ಗಾವಳಿರದೆ ಗುರಿ ಗೆಲ್ಲುವ ಹಾದಿ ಹಿಡಿದ ಋಷಿಯಾಗಿ ಧ್ಯೇಯದೆಡೆಗೆ ಅಣಿಯಾಗುತ ಸಂಯಮದಾ ಗಣಿಯಾಗಿ || 2 || ವಿಘ್ನ ವೈರವೆದುರನಂತ ಸಕಲ ನೋವ ನುಂಗಿ ನಿಂತ ಶತ್ರುಗಳನು ಮಿತ್ರರಾಗಿ ಪರಿವರ್ತಿಸಿ ಗೆದ್ದ ಸಂತ || 3 || ಸಾಧನೆಗಳ ಆರೋಹಿ […]