ಯೋಗ ಮಾಡಿರೋ ಎಲ್ಲರು ಯೋಗವ ಮಾಡಿರೋ ಎಲ್ಲ ಭೋಗವ ಬದಿಗೆ ಇಟ್ಟು, ಆರೋಗ್ಯವಂತರಾಗಲು ಇಂದು|| ಪ || ರೋಗ-ರುಜಿನವಾ ದೂರವಿರಿಸಲು, ಪ್ರತಿದಿನ ಹರುಷದಿ ಬದುಕಲು ನೀವು ಋಷಿ ಪುಂಗವರ ನೆನೆಯುತ ನೀವು, ಸಾಧಕರಾಗಿ ಬೆಳೆಯಲು ಎಲ್ಲರು ||ಯೋಗ..|| ಸೂರ್ಯನಮಸ್ಕಾರ ಮಾಡಲು ದಿನವೂ, ಸಂಪೂರ್ಣ ಫಲವ ಪಡೆವಿರಿ ನೀವು| ಪ್ರಾಣಾಯಾಮವ ಮಾಡಲು ನಿಮಗೆ, ನೂರು ವರುಷದ ಆಯುಷ್ಯವಿಹುದು ||ಯೋಗ ..|| ವಜ್ರಕಾಯವ ಗಳಿಸಲು ನೀವು ವಜ್ರಾಸನವ ಮಾಡಿಯೇ ನೋಡಿ ಚುರುಕುತನದ ಬುದ್ಧಿಗಾಗಿ, ಶೀರ್ಷಾಸನವ ಮಾಡಿಯೇ ನೋಡಿ||ಯೋಗ..|| ಅರ್ಧ ತಾಸಿನ […]