ನಾಡಿಗೆ ಸೇವೆಯ ಸಲ್ಲಿಸಲು ಬಾಡಿದ ಮನಗಳ ಅರಳಿಸಲು ವೀರ ಪ್ರತಿಜ್ಞೆಯ ತೊಟ್ಟಿಹೆವು…. ಹೊಸನಾಡೊಂದನು ಕಟ್ಟುವೆವು || ಪ || ರೂಢಿಯ ಮೌಢ್ಯದ ಗೋಡೆಯ ಕೆಡವಿ ಗುಡಿಸಲುವಾಸಿಗಳಾ ಮೈದಡವಿ ಒಲವಿನ ಧಾರೆಯ ಹರಿಸುವೆವು………. ಅರಿವಿನ ದೀಪವನುರಿಸುವೆವು || 1 || ನಮ್ಮ ಪರಂಪರೆಯನು ಸ್ಮರಿಸುತಲಿ ಘನ ಆದರ್ಶವ ಅನುಸರಿಸುತಲಿ ಮುಚ್ಚಿದ ಕಂಗಳ ತೆರೆಸುವೆವು………. ಕೆಚ್ಚೆದೆ ಸಾಹಸ ಮೆರೆಸುವೆವು || 2 || ವಿಘ್ನ ವಿರೋಧದ ಭೀತಿಯ ತ್ಯಜಿಸಿ ಕೀರ್ತಿ ಪ್ರಶಂಸೆಯ ಮೋಹವ ದಹಿಸಿ […]