ಭಾರತಾವನಿ ನಿನ್ನ ಆಶ್ರುಧಾರೆಗೆ ತೊಯ್ದು ತೆರೆಯಿತೆ ಪರಶಿವನ ಹೃದಯದ್ವಾರ ಶಿಶು ರೂಪವನು ತಳೆದು ನಿನ್ನ ಮಡಿಲಲಿ ಬೆಳೆದು ಹರಿಸಿದನೆ ಜಗದೆಡೆಗೆ ಪ್ರೇಮ ಪೂರ || ಪ || ನವಯುಗದ ದೃಷ್ಟಾರ ಯುವ ಮನದ ನೇತಾರ ವಿವೇಕದಲಿ ಆನಂದ ಕಂಡ ಸಂತ ಪತಿತ ಶೋಷಿತ ಮನಕೆ ಬಳಲಿ ಬಾಗಿದ ಜನಕೆ ಬೆನ್ನೆಲುಬು ತಾನಾಗಿ ಸೆಟೆದು ನಿಂತ || 1 || ಅಂಗನೆಯರಾಹ್ವಾನ ಅಂದಣದ ಬಹುಮಾನ ಒಂದಿನಿತು ಕುಂದಿಸದ ಧವಳ ಶೀಲ ಜ್ಞಾನ ತೇಜೋಮಯದ ತೆರೆದ ಕಂಗಳಕಾಂತಿ ಫಾಲನೇತ್ರನ ಕರದಿ […]