ಭಾರತ ದೇಶದ ಏಕತೆಯಳಿಸುವ

ಭಾರತ ದೇಶದ ಏಕತೆಯಳಿಸುವ ಕೆಲಸವು ಪ್ರತಿದಿನ ನಡೆಯುತಿದೆ ಸೋಗಿನ ಪ್ರಗತಿಯ ಹೆಸರಲಿ ನಿತ್ಯವು ಸಂಸ್ಕೃತಿ ಸಭ್ಯತೆ ಕೆಡುತಲಿದೆ || ಪ || ಮೂರ್ಖ ಮತಾಂಧರು ಮಾಡುತಲಿಹರು ಮನೆಯೊಳಗಡೆಯೇ ಮಸಲತ್ತು ಒಳಗಡೆ ನುಸುಳುವ ಮುಸಲರಿಗೆಲ್ಲ ಅಶನವಸತಿಗಳ ನೆರವಿತ್ತು || 1 || ಮೊಲೆಯನು ಉಣಿಸುವ ನೆಪದಲಿ ಪೂತನಿ ಮೋಹಕ ರೂಪದಿ ಬರುತಿಹಳು ಹೊನ್ನಿನ ಮಣ್ಣಿನ ಆಮಿಷ ತೋರುತ ಮತಪರಿವರ್ತನೆ ಮಾಡಿಹಳು || 2 || ಧರ್ಮ ವಿಲೋಪವು ಮತನಿರಪೇಕ್ಷತೆ ಸುಮ್ಮನೆ ಮಾತಿನ ಬಡಿವಾರ ಕುಟಿಲತೆ ಮೆರೆದಿಹ ರಾಜಕಾರಣವು ಮಾಡಿದ […]

Read More

ಅಖಂಡ ಹಿಂದು ಭಾರತ

ಅಖಂಡ ಹಿಂದು ಭಾರತ ಸಾಧನೆಗೊಂದುಗೂಡಿ ಬನ್ನಿ ಹೆಬ್ಬಯಕೆಯ ಸಾಧಿಸುವ ಹಾದಿಯಲಿ ಎಲ್ಲರೊಂದೆ ಎನ್ನಿ || ಪ || ಜಗತ್ತಿನೆಲ್ಲೆಡೆ ಸಾಕ್ಷಿಯಾಗಲಿದೆ ಭರತನಾಳಿದ ದೇಶ ಸಾಸಿರ ದಾಳಿಗೆ ಉತ್ತರವಿತ್ತ ವೀರಧೀರ ಸಂಘರ್ಷ ಹಿನ್ನಡೆಯಾಗಿದೆ ಸತ್ತಿಲ್ಲ ಮನೆ ಮನದೊಳಡಗಿದೆ ಹಿಂದುತ್ವ ಭೂಮಿ ಎಲ್ಲೆಡೆ ಪಾಲಿಸಬೇಕಿದೆ ಭಾರತೀಯ ಸತ್ವ ಮಾನವತೆಯ ತತ್ವ || 1 || ಸೋಲಿನ ಶೂಲಕೆ ಸಿಲುಕಿ ನರಳುವ ಹೇಡಿ ಜನಾಂಗವು ನಾವಲ್ಲ ಮೃತ್ಯುವಿನೆದೆಗೆ ಅಂತ್ಯ ಸಾರುವ ಧೀರ ಹೃದಯಗಳೇ ನಾವೆಲ್ಲ ಎಮ್ಮ ಪೂರ್ವಜರು ಕೊಡಲಿ ಎತ್ತಿದರೆ ತಲೆಬಾಗಿತ್ತು […]

Read More

ಉತ್ತಿಷ್ಠ ಭಾರತ – ಕೋಟಿ ಹೃದಯ ಧಮನಿಗಳಲಿ

ಕೋಟಿ ಹೃದಯ ಧಮನಿಗಳಲಿ ಹರಿಯಲಿ ಬಿಸಿನೆತ್ತರು ರಾಷ್ಟ್ರರಕ್ಷೆಗಾಗಿ ದೀಕ್ಷೆ ತೊಟ್ಟು ದುಡಿಯಿರೆಲ್ಲರು ಕೋಟಿ ಹೃದಯ – ‘ಭಾವ-ರಾಗ’ ಮೇಳೈಸಲಿ ತಾಳಕೆ ಹನಿಗೂಡಿಸಿ, ದನಿಗೂಡಿಸಿ ಒಕ್ಕೊರಲಿನ ಗಾನಕೆ | ಅಸುರೆದೆಗಳು ಬಿರಿಯಲಿ | ಸುರಭಾವಗಳರಳಲಿ | ಎದ್ದೇಳಿರಿ, ಸಜ್ಜಾಗಿರಿ ! ಧರ್ಮಕೆ ಗೆಲುವಾಗಲಿ | ನವಿರೇಳಲಿ, ನಲಿವಾಗಲಿ ಭರತಾಂಬೆಯ ಉಸಿರಲಿ || ಋಷಿ-ಮಹರ್ಷಿ-ಸಾಧು-ಸಂತರುದಿಸಿ ಬಾಳಲಿಲ್ಲವೆ ? ಜ್ಞಾನ-ಭಕ್ತಿ-ಧರ್ಮ-ಕರ್ಮದೀಪ್ತಿ ಬೆಳಗಲಿಲ್ಲವೆ ? ಕಾವ್ಯ-ಗೀತ-ನೃತ್ಯಕಲೆಯ ತೈಲವೆರೆದರಲ್ಲವೆ ? ‘ವಿಶ್ವಭಾರತಿ’ಯನು ಬೆಳಗೆ ದೀಪ್ತವಾಯ್ತು ವಿಶ್ವವೆ | ಉಜ್ವಲ ಗತಸಿರಿಯಿದೆ | ಶೌರ್ಯದ ಸ್ಮೃತಿಯೆಮಗಿದೆ […]

Read More

ಭಾರತ ವರಸಂತಾನ ನಾವು

ಭಾರತ ವರಸಂತಾನ ನಾವು, ಭಾರತ ವರಸಂತಾನ || ಪ || ಕೆಚ್ಚೆದೆ ಕಲಿಗಳ ಕೂರಸಿ ಕಡಿತಕೆ ಸಾಸಿರ ಅರಿಶಿರ ಬಿದ್ದವು ನೆಲಕೆ ಜಿತ ಭಗವಾಧ್ವಜ ಏರಿತು ನಭಕೆ, ದುಷ್ಟರ ರಿಪು ಬಲವಾನ ನಾವು || 1 || ರಕ್ಷಿತವಾದವು ದೇಶಗಳೆಲ್ಲ ಸ್ಥಿರಚರ ಹಿರಿಕಿರಿ ಜೀವಿಗಳೆಲ್ಲ ಭಯಕಂಪಿತ ಶತ ಪಾಪಿಗಳೆಲ್ಲ, ಸಭ್ಯ ಪ್ರಭಾವಿ ಮಹಾನ ನಾವು || 2 || ವೇದದ ಗಾನವು ಹರಡಿತು ಭರದಿ, ಮೋಹ ಭ್ರಮೆಗಳು ಅಳಿದವು ಜಗದಿ ಮನುಜತ್ವದ ಸಸಿ ಮೊಳೆಯಿತು ಮನದಿ, ವಿಶ್ವಕೆ […]

Read More

ನವಭಾರತ ನಿರ್ಮಾಣಕೆ ಎರಗಿದ

ನವಭಾರತ ನಿರ್ಮಾಣಕೆ ಎರಗಿದ ಐಕ್ಯ ವಿರೋಧಿ ಸವಾಲುಗಳೇ ಯುವ ಭಾರತ ಹೊರಟಿದೆ ಸ್ವೀಕರಿಸಲು ನಿಮ್ಮನು ನಿಮ್ಮ ಅಖಾಡದಲೆ || ಪ || ಅಪ್ರತಿಹತವಿದು ನಾಡಿಗೆ ಕೂಡಿದ ಧ್ಯೇಯ ಜೀವನದ ಬಲದರಿವು ತನುಮನಗಳ ಅನುಶಾಸನ ನೀಡಿದ ಇತಿಹಾಸ ಪ್ರವಾಹದ ತಿರುವು         || 1 || ಸಂಘಟನೆಯ ಗಂಗೋತ್ರಿಯ ಬುಗ್ಗೆ ನಿಜ ಸಮಾಜದಂಚಿನವರೆಗೆ ಅನುಜತ್ವದ ಸ್ನೇಹಾಂಕಿತ ಲಗ್ಗೆ ಮನುಜತ್ವದ ಮೇರೆಯವರೆಗೆ                || 2 || ಧ್ರುವ […]

Read More

ಜಯ ಭಾರತ ಜಯ ಭಾರತ

ಜಯ ಭಾರತ ಜಯ ಭಾರತ ಜಯ ಭಾರತವೆನ್ನಿರಿ ಜಗನ್ಮಾತೆ ಭಾರತಿಯ ಚರಣಕೆಲ್ಲ ನಮಿಸಿರಿ || ಪ || ಮಲಗಿರುವ ಹಿಂದುಗಳ ಎಚ್ಚರಿಸಿ ಏಳಿಸುವ ಸಂಘಶಕ್ತಿ ಬೆಳದಿಹ ವಿಶ್ವರೂಪ ತೋರಿಸುವ ನವಭಾರತ ನಿರ್ಮಾಣಕೆ ಒಂದಾಗಿ ದುಡಿಯುವ ಹಿಂದುಗಳ ಸಂಘಟಿಸಿ ಭಾರತವ ರಕ್ಷಿಸುವ || 1 || ಜಗಕೆಲ್ಲ ಕೊಡುವಂಥ ಜ್ಞಾನ ನಮ್ಮಲ್ಲಿರಲು ನಾವು ಹೀನ ದೀನರಲ್ಲ ಎಂದು ಜಗಕೆ ತೋರುವ ಜಗವನ್ನೇ ಗೆಲ್ಲುವಂಥ ಶಕ್ತಿ ಭುಜದಲ್ಲಿರಲು ನಮ್ಮ ಶೌರ್ಯದಿತಿಹಾಸ ಮತ್ತೊಮ್ಮೆ ಬರೆಯುವ || 2 || ಭಾಷೆ ವೇಷ […]

Read More