ಕಲೆಯು ರಂಜನೆಗಲ್ಲ ಭಗವದಾರಾಧನೆಗೆ ಶಿವನಾಗಿ ಶಿವಪೂಜೆ ಬಾಳಬಯಕೆ ಉನ್ಮತ್ತಚಿತ್ತಕ್ಕೆ ಪಥವೇನು ಗತಿಯೇನು ಸ್ಥಿರಚಿತ್ತ ಉತ್ಕರ್ಷ ಕಲೆಯ ಹರಕೆ || ಪ || ಭಾವಪ್ರವಾಹಕ್ಕೆ ತಾಳಲಯಗಳ ತೀರ ಶಾಂತ ಸುಖಸಾಗರದ ದಿಶೆಗೆ ಯಾನ ರುದ್ರತಾಂಡವದೊಡನೆ ಉಮೆಯಲಾಸ್ಯದ ಮಿಲನ (ಧೀಂತಕಿಟ ಧಿರಗಿಟತಕಿಟ ಧೀಂತಕಿಟ ಧೀಂತಾ) ಭದ್ರವನೆ ಉಲಿಯಿತು ರುದ್ರವೀಣಾ || 1 || ಸೃಷ್ಟಿಮೂಲವೆ ನಾದ ಪ್ರಣವಮಂತ್ರ ನಿನಾದ ಪ್ರಸ್ತರಣ ವಿಸ್ತರಣ ಶಾಸ್ತ್ರವೇದ ಒಂದು ಹಲವಾಗುವುದು ಹಲವರಲು ತಾನಿಹುದು ಪಠಣ ಗಾಯನದಿಂದ ತತ್ವ ಬೋಧ || 2 || ಮರುಳು […]