ಕರುಳಿನ ಕರೆ ಕೇಳಿಸದೆ? ಮರಳಿ ಬನ್ನಿ ಮನೆಗೆ ತೆರಳದಿರಿ ಮೋಹಕದ ನಗರಿಯೆಡೆಗೆ ನಿಶಿದಿನದ ನರಳಿಕೆಯ, ಕನವರಿಕೆ ಜೋಂಪುಗಳ ತೊರೆದು ಮಾಯಾ ನಗರಿ, ಬನ್ನಿ ಮನೆಗೆ || ಪ || ಬರಿದೆ ಬವಣೆಯ ಬದುಕು ಬನ್ನ ಬಳಲಿಕೆಯಿಂದ ಹೊರಳ ಸಹಜತೆಯೆಡೆಗೆ- ನಮ್ಮ ಮನೆಗೆ ಪ್ರೀತಿ, ಪ್ರೇಮದ ಹೊನಲು, ಅನುಭವದ ಹೊಂಬಿಸಿಲು ನೆಮ್ಮದಿಯ ಹೊಸ ಚಿಗುರು ಒಡೆವ ಕಡೆಗೆ || 1 || ಭ್ರಮೆಯ ಮಾಯಾಂಗನೆಯ ಬಡಿವಾರದುರುಳಿಂದ ಮುಕ್ತರಾಗುತ ತಾಯ ಮಡಿಲಿನೆಡೆಗೆ. ಭೂರಮೆಯು ಹಸಿರುಡುಗೆ ಸೆರಗಿನೊಳಗಡೆ ಸೆಳೆದು ಸ್ತನ್ಯ ಸುಧೆಯನು […]