ಅರಳಲಿದೆ ನವಭಾರತ ದೇಶ

ಅರಳಲಿದೆ ನವಭಾರತ ದೇಶ ಕಗ್ಗತ್ತಲ ಒಡಲಿಂದ ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ || ಪ || ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ || 1 || ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ ಜಾಗೃತಗೊಳಿಸಿ ಸುಷುಪ್ತ ಜನಾಂಗವ ಸಮಯವು ಮೀರುವ ಮುನ್ನ ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ || 2 || ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ […]

Read More