ಅಮ್ಮನ ಸಮವಲ್ಲವೇ ಮನುಜ ನಮ್ಮಯ ಗೋಮಾತೆ ಅಮೃತದಂತಹ ಹಾಲನ್ನುಣಿಸುವ ಪ್ರೀತಿಯ ಜಗನ್ಮಾತೆ || ಪ || ದುಷ್ಟರು ಶಿಷ್ಟರು ಭೇದವ ತೋರದೆ ಕಾಣುವಳಲ್ಲ ಮಗುವಂತೆ ಉಸಿರಿರುವನಕವು ಕೆಡುಕನು ಬಯಸದೆ ಪೊರೆಯುವಳಲ್ಲ ತಾಯಂತೆ || 1 || ಮಾತೆಯ ಸಹನೆಗೆ ಸಾಟಿಯದಾವುದು ತುಂಬಿದ ಒಡಲು ಒಲವಿಂದ ಗೋ ಒಲುಮೆಯನು ಪಡೆದು ಬದುಕಲು ಜೀವನವೇ ಬಲು ಚಂದ || 2 ||