ನುಡಿದಂತೆ ನಡೆದವನ ಅಡಿಗೆನ್ನ ನಮನ

ನುಡಿದಂತೆ ನಡೆದವನ ಅಡಿಗೆನ್ನ ನಮನ ಕತ್ತಲಲಿ ಬೆಳಕಿತ್ತ ನಿನಗೆನ್ನ ನಮನ || ಪ || ಪರದಾಸ್ಯ ಮುಸುಕಿರಲು ಪರತತ್ವ ತುಂಬಿರಲು ಸ್ವಾಭಿಮಾನದ ಜ್ವಾಲೆ ಪ್ರಜ್ವಲಿಸಿ ಬೆಳಗಿಸಿದೆ ಬರಿದಾದ ಭಾವಗಳ ಒಡೆದೊಡೆದ ಹೃದಯಗಳ ಒಂದೆಡೆಗೆ ಬೆಸಹೊಯ್ದು ದುರ್ಭೇದ್ಯ ನಿರ್ಮಿಸಿದೆ || 1 || ಬಡತನದ ಬೇಗೆಯಲಿ ಬರಿದಾದ ಸಿರಿತನದಿ ಹಾಲಾಹಲವ ಕುಡಿದು ಅಮೃತವ ಸುರಿಸಿರುವೆ ಹಗಲಿರುಳು ಇಲ್ಲದೆಯೇ ನಿಃಸ್ವಾರ್ಥ ಸೇವೆಯಲಿ ಮೈ ಮನವ ದಂಡಿಸುತ ಆದರ್ಶ ಬೆಳೆಸಿರುವೆ || 2 || ಬಹು ಜನಕೆ ನೀ ತಿಳಿಯೆ ತಿಳಿದವಗೆ […]

Read More