ವಂದಿಪೆನು ಈ ಭೂಮಿಗೆ ನಮನ ಭಾರತ ಮಾತೆಗೆ || ಪ || ಹರನ ಹೊತ್ತಿಹ ಹಿರಿಯ ಗಿರಿಯಿದು ಹಿಮದ ಹೂವಿನ ಹಂದರ ಮೂರುಸಾಗರ ಮಿಲನಗೊಂಡಿಹ ಮಹಿಮೆಯಾಂತಿಹ ಮಂದಿರ ತೊದಲುನುಡಿಗಳ ತಪ್ಪುತಿದ್ದುತ ತತ್ವತೋರಿದ ತಾಯಿಗೆ ಮಡಿಲ ಮಕ್ಕಳಿಗೆಲ್ಲ ಮಮತೆಯ ಮಧುವನುಣಿಸಿದ ಮಾತೆಗೆ || 1 || ತರಳರೆಲ್ಲರ ತಮವ ತೊಳೆಯುವ ತೀರ್ಥತೊರೆಗಳ ತಾಣವು ಉನ್ನತಿಯ ಉತ್ತುಂಗಕೇರಿದ ಉತ್ತಮರ ಉದ್ಯಾನವು ಸಪ್ತಸಾಗರ ಸುತ್ತಿಸುಳಿದಿಹ ಸಂಸ್ಕೃತಿಯ ಸಿರಿಸೌರಭ ಧರೆಗೆ ದಾರಿಯ ದೀಪದಂತಿಹ ದಿವ್ಯದರ್ಶನ ದುರ್ಲಭ || 2 || ಶಮನಗೊಳ್ಳದು ಶೌರ್ಯದಾರ್ಭಟ […]
ನಾಡದೇವಿಯ ಆರಾಧನೆ, ಸುತ ಕೋಟಿ ಧನ್ಯತೆ ಅಭಿವಂದನೆ ಮಾನಸ ಸರಸಿನ ಭಾವಕಮಲ, ಅರಳಿ ತಳೆದ ಪರಿಕಲ್ಪನೆ || ಪ || ಭಾಷೆ ಬೇರೆ, ವೇಷ ಬೇರೆ, ವೃತ್ತಿ ಬೇರೆ, ಪ್ರವೃತ್ತಿ ಬೇರೆ ಅಂಗುಲಂಗುಲ ನೆಲದಾ ಮತಿಯ, ಕೃತಿ ಸಂಸ್ಕೃತಿಯ ಗತಿಯು ಬೇರೆ ಉಸಿರಿನ ಪ್ರಾಣ ಗಾಳಿಯು ಒಂದೇ, ಹಸುರಿನ ಜೀವ ನೆಲ ಜಲ ಒಂದೇ ಹರಿಯುವ ರಕ್ತದ ಕಣಕಣ ಒಂದೇ, ನಾಡ ದೇವಿಯ ಪೂಜೆಗೆ ಸಮರಸ ಮಂತ್ರ ಸುಮಾರ್ಚನೆಯೊಂದೇ || 1 || ಅಳಿಸುವ ಅಸಮತೆ ಗಳಿಸುವ […]