ಜಯಜಯ ಅಭಿನವ

ಜಯಜಯ ಅಭಿನವ ಋಷಿವರ ಮಾಧವ ನಿನ್ನಯ ಚರಣಕೆ ನಮೋ ನಮೋ || ಪ || ಜನ್ಮಜಾತ ಅನುಪಮ ಪ್ರತಿಭಾನ್ವಿತ ಧೀಮಂತಿಕೆಯ ಪ್ರತಿರೂಪ ಪೂರ್ಣ ಜೀವನವ ಮುಡಿಪಾಗಿರಿಸಿದೆ ಅಳಿಸಲು ಮಾತೆಯ ಸಂತಾಪ || 1 || ಭುಜಗಳ ಗಡಿಯನು ದಾಟಿದ ಸೊಂಪಿನ ಕೇಶರಾಶಿಯ ಲಾಸ್ಯದಲಿ ದೇಶವಿದಕೆ ಹೊಸ ದಿಶೆಯನು ತೋರಿದೆ ಹಿಂದುತ್ವದ ನವಭಾಷ್ಯದಲಿ || 2 || ಸರಳ ಜೀವನ ಉದಾತ್ತ ಚಿಂತನ ನಿನ್ನಯ ಬಾಳ ವಿಶೇಷತೆಯು ನವಭಾರತ ನಿರ್ಮಾಣದ ಕಾರ್ಯದಿ ಸಾಧಕ ಜನಕದು ಪ್ರೇರಣೆಯು || 3 […]

Read More

ವಿರಸವ ಮರೆತು ಸರಸದಿ ಬೆರೆತು

ವಿರಸವ ಮರೆತು ಸರಸದಿ ಬೆರೆತು ಅಭಿನವ ಭಾರತ ಕಟ್ಟೋಣ | ತರತಮವಿಲ್ಲದ ಸಮರಸ ಭಾವದಿ ಸ್ವರ್ಗವನಿಲ್ಲೆ ರಚಿಸೋಣ ||      || ಪ || ಮೇಲುಕೀಳುಗಳ ಕಿತ್ತೊಗೆದು ಸರ್ವಸಮಾನತೆ ಸಾಧಿಸುವ | ಏಳುಬೀಳುಗಳ ಹಾದಿಯಲಿ ಏಳುಬೀಳುಗಳ ಹಾದಿಯಲಿ ||     || 1 || ಎದೆಗುಂದದೆ ನಾವ್ ಮುನ್ನಡೆವ ಮಾನವ ನಿರ್ಮಿತ ಭೇದಗಳು ಧರ್ಮದ ಅನುಮತಿ ಅದಕಿಲ್ಲ | ನಾಡಿನ ನೈಜ ಸುಧಾರಣೆಗೆ ಅನ್ಯರ ಆಶ್ರಯ ಬೇಕಿಲ್ಲ ||     || 2 || ಜಾತೀಯತೆಯನು ಬದಿಗಿರಿಸಿ ರಾಷ್ಟ್ರೀಯತೆಯನು ಬಲಪಡಿಸಿ ಹಿಂದುತ್ವದ ಹೊಂಬೆಳಕಿನಲಿ […]

Read More

ಅಭಿನವ ಭಾರತದ ನಿರ್ಮಾಣಕೆ

ಅಭಿನವ ಭಾರತದ ನಿರ್ಮಾಣಕೆ ಯುವಜನ ಶಕ್ತಿಯೆ ಆಧಾರ ಯುಗಗಳ ಕನಸಿಗೆ ಆಕಾರ… ನೀಡುವುದೆಮ್ಮಯ ನಿರ್ಧಾರ || ಪ || ಆಸೇತು ಹಿಮಾಚಲ ವಿಸ್ತಾರದ ತಾಯ್ನೆಲ ದೇವರ ವರದಾನ ಭಾರತ ಮಾತೆಯ ವೀರ ಸುಪುತ್ರರು ಎಂಬುವುದೆಮಗೆ ಅಭಿಮಾನ || 1 || ಋಷಿಮುನಿ ಸಂತರ ಕರ್ಮಭೂಮಿಯಿದು ಚತುರ್ವೇದಗಳ ತವರೂರು ಖಡ್ಗವ ಪಿಡಿದು ನಾಡಿನ ರಕ್ಷಣೆ ಗೈದಿಹ ಶೂರರ ನೆಲೆವೀಡು || 2 || ಆಧುನಿಕತೆಯ ವ್ಯಾಮೋಹದಲಿ ನಮ್ಮತನವನು ತೊರೆಯದಿರಿ ವಿಶ್ವಕೆ ದಾರಿಯ ತೋರಿದ ಭಾರತ ಎಂಬುದನೆಂದೂ ಮರೆಯದಿರಿ || […]

Read More