ಆತ್ಮನಿರ್ಭರ ಭಾರತ ಸ್ವಾಭಿಮಾನವ ಸಾರುತ ಜ್ಞಾನ ಭಿಕ್ಷೆಯ ಜಗಕೆ ನೀಡುತ ನಗುತಲಿರಲಿ ಸಂತತ || ಪ || ಎಡರು ತೊಡರು ಗಳಿಹುದು ಬಹಳ ಸುಲಭವಲ್ಲವು ಆತ್ಮನಿರ್ಭರ ದಿಟ್ಟ ಆತ್ಮ ಬಲದಿ ನಡೆಯುತ ಸಾರುವ ನವ ಕ್ರಾಂತಿ ಸಮರ ಬನ್ನಿರೆಲ್ಲರು ಒಂದಾಗುವ ಗೆಲ್ಲುವ ಈ ಶಾಂತ ಸಮರವ ಸ್ವಾರ್ಥ ಮರೆತು ರಾಷ್ಟ್ರಕಾಗಿಯೆ ದಿಟದಿ ಜೀವನ ಸವೆಸುವ || 1 || ನಮ್ಮ ಏಳ್ಗೆಗೆ ನಾವೇ ಶಿಲ್ಪಿಯು ಎಂದು ತಿಳಿದು ನಡೆಯುವ ಸತ್ವ ಶಕ್ತಿ ಯುಕ್ತಿಯಿಂದಲಿ ರಾಷ್ಟ್ರದ ಸೇವೆಯ ಮಾಡುವ […]