ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ

ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ ಮುದದಲಿ ಆರತಿ ಬೆಳಗುತ ಬೆಳಗುವೆ ಭಾರತಿಗೆ, ಆರತಿ ಭಾರತಿಗೆ || ಪ || ಮೂಡುತ ರವಿಕಿರಣ, ಭೂತಾಯಿಗೆ ಜೀವಕಣ ರವಿ ಶಶಿ ಭೂಮಿಗೆ ಬಾಗಿ ಆರತಿ ಬೆಳಗುವೆವು. ಮಂಗಳಾರತಿ ಬೆಳಗುವೆವು || 1 || ಋಷಿ ಮುನಿಜನ ಜನನೀ, ಕೃಷಿಜನ ದೇವಿಯು ನೀ ರಸಋಷಿ ಕವಿಗೂ ಮಾತೇ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು || 2 || ಅಮೃತ ಸಮಜಾತೇ, ಕ್ಷೀರಾಮೃತವನು ಕೊಡುವೆ ಗೋಪಬಾಲಗೋಮಾತೆ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು […]

Read More

ಒಂದುಗೂಡಿ ಬೆರೆತುಕೊಂಡು (ತಾಯಿ ಭಾರತಿ ನಿನಗೆ ಆರತಿ)

ಒಂದುಗೂಡಿ ಬೆರೆತುಕೊಂಡು ಬಂಧು ಭಾವ ಬೆಳೆಸಿಕೊಂಡು ಒಕ್ಕೊರಳಲಿ ಕೂಗುವಾ ತಾಯಿಗೆ ಜಯಘೋಷವ ತಾಯಿ ಭಾರತಿ ನಿನಗೆ ಆರತಿ || ಪ || ವಿಶ್ವಕೆ ತಂಪೆಲರನಿತ್ತ ಸುಂದರ ವಟವೃಕ್ಷವು ಜ್ಞಾನದ ಸುಪ್ರಭೆಯನಿತ್ತು ಪ್ರಜ್ವಲಿಸುವ ಜ್ಯೋತಿಯು ಸಂಸ್ಕಾರದ ಸುಧೆಯ ಧಾರೆ ಹರಿವ ಮಹಾ ಸಲಿಲವು ವಿಶ್ವಪ್ರೇಮದಪ್ಪುಗೆಯಲಿ ಮಮತೆಯೀವ ನಾಕವು || 1 || ಬಾನೆತ್ತರವೇರಲಿ ಈ ಮಣ್ಣಿನ ಕೀರ್ತಿಯು ಭೂಮಂಡಲದಾಚೆಗೂ ಹಬ್ಬಲಿ ಜಯಗೀತೆಯು ಜನರೆದೆಯಲಿ ಅನುರಣಿಸಲಿ ದೇಶಭಕ್ತಿ ಗಾನವು ಮನದಲಿ ಮನೆಮಾಡಲು ಸ್ವಾಭಿಮಾನ ಮಂತ್ರವು || 2 || ತರುಣಶಕ್ತಿಯೇಳಲಿ […]

Read More

ಆರತಿ ಬೆಳಗಲು ಬಾರೋ ಗೆಳೆಯ

ಆರತಿ ಬೆಳಗಲು ಬಾರೋ ಗೆಳೆಯ ಭಾರತಿ ಎನ್ನಲು ನಲಿಯಲಿ ಹೃದಯ ಮಮತೆಯ ಮೂರುತಿ ಮಾತೆಯ ಕೀರುತಿ ಅನುದಿನ ಹಾಡಲು ಬಾ ಬಾ ಸದಯ || ಪ || ಕೋಟಿ ಕೋಟಿ ಜನರೆದೆಯನು ಮೀಟುತ ಪುಲಕಿತಗೊಳಿಸುತ ಮನ ಅರಳಿಸುತ ಮಾತೃಪ್ರೇಮದಾ ಅಮೃತ ನೀಡುವ ಈ ಶುಭಮಂಗಳೆಗಿದೊ ಪೊಡಮಡುವ || 1 || ಲಕ್ಷಲಕ್ಷ ನರಜನ್ಮವನೆತ್ತಿ ಸಾವಿರ ಸಲ ಭೂಮಂಡಲ ಸುತ್ತಿ ಬಂದರೆ ಸಿಗುವುದೆ ಇಂತಹ ನೆಲವು ? ಪುಣ್ಯ ಪ್ರಸಾದವು – ಈ ತಾಯೊಲವು || 2 || […]

Read More

ಮಾತೃಮಂದಿರದೊಳಗಿದೋ ಬಾ

ಮಾತೃಮಂದಿರದೊಳಗಿದೋ ಬಾ ಬೆಳಗಿಸಲು ಶುಭ ಆರತಿ || ಪ || ಅಳಿದಿರಲು ಹಿಂದಿನದು ಗರಿಮೆ ಬಂಧನದೊಳಿರೆ ಮಾತೆ ಪ್ರತಿಮೆ ವಿಭವ ಸಂಪದಹೀನ ಪ್ರತಿಮೆಯ ನಗ್ನತೆಯೆ ತಾ ಕರೆಯುತಿಹುದು || 1 || ಇಂದು ನಡೆಯಲಿ ಮಾತೃವಂದನ ಕಡಿದು ಬೀಳಲಿ ತಾಯ ಬಂಧನ ಕೋಟಿ ಕಂಠದಿ ಗರ್ಜಿಸಲಿ ರಣವಾದ್ಯ ತಾ ತಾಯ್ನೆಲದ ಜಯಕೆ || 2 || ತೂರ್ಯಘೋಷವು ಮೊಳಗುತಿರಲು ದೀಪಜ್ಯೋತಿಯು ಬೆಳಗುತಿರಲು ಕರುಣೆಯಿಂದೆದೆ ತುಂಬಿ ವೀಣೆಯು ತಾನೆ ತಾ ಝೇಂಕರಿಸುತಿರಲು || 3 ||

Read More