ಬೆಳಕನು ಬೀರುವ ಜ್ಯೋತಿಗಳಂತೆ ಕಂಪನು ಸೂಸುವ ಪುಷ್ಪಗಳಂತೆ ಸಾರ್ಥಕ ಜೀವನ ಬಾಳೋಣ ನಾಡಿನ ಸೇವೆಯ ಮಾಡೋಣ || ಪ || ಹುಟ್ಟು – ಸಾವು ದಡಗಳ ನಡುವೆ ಹರಿಯುವ ಪಾವನ ಜೀವನದಿ ನೀರುಣಿಸುತ ಬಾಯಾರಿದ ಧರೆಗೆ ಸೇರಲಿ ಧ್ಯೇಯದ ಸಾಗರದಿ || 1 || ಕಂಬನಿಯೊರೆಸುವ ಕಾಯಕವೆಮದು ಬೆಂಬಲಕಿದೆ ದೃಢ ಸಂಕಲ್ಪ ಆದರ್ಶದ ಅಡಿಗಲ್ಲಿನ ಮೇಲೆ ಅರಳಲಿ ನವಭಾರತ ಶಿಲ್ಪ || 2 || ಅಕ್ಷಯ ಸ್ಫೂರ್ತಿಯ ಅಮಿತೋತ್ಸಾಹದ ಕರ್ಮಯೋಗಿ ಅಜಿತರ ತೆರದಿ ಪೂರ್ಣ ಸಮರ್ಪಿತ ಭಾವನೆಯಿಂದ […]
ಭಾರತಾಂಬೆ ನಮ್ಮ ತಾಯಿ ನಾವು ಅವಳ ಮಕ್ಕಳು ಒಂದುಗೂಡಿ ಬನ್ನಿರೆಲ್ಲ ಭವ್ಯರಾಷ್ಟ್ರಕಟ್ಟಲು || ಪ || ಒಂದೆ ಮಣ್ಣ ಕಣಗಳಲ್ಲಿ ಇರದು ಎಂದೂ ಭಿನ್ನತೆ ಒಂದೆ ನೀರ ಹನಿಗಳಲ್ಲಿ ಇರುವುದೇ ವಿಭಿನ್ನತೆ? ಭೇದಭಾವ ಬಿಸುಟು ದೂರ ಸಾಧಿಸಿ ಸಮಾನತೆ ಕಾಣಬನ್ನಿ ನಾಡಸೇವೆಯಲ್ಲಿ ಬಾಳಧನ್ಯತೆ || 2 || ನಮ್ಮ ನಾಡ ಚರಿತೆಯ ಪುಟ ಪುಟ ರೋಮಾಂಚಕ ಛತ್ರಪತಿಯ ವೀರಗಾಥೆ ಅಮಿತ ಸ್ಫೂರ್ತಿದಾಯಕ ಕೋಟಿ ಕೋಟಿ ಪುತ್ರರಿರಲು ಮಾತೆಗೇಕೆ ಕಂಬನಿ? ನಾಡರಕ್ಷೆಗಾಗಿ ಮುಡಿಪು ನೆತ್ತರಿನ ಹನಿ ಹನಿ || […]