ರಾಷ್ಟ್ರ ಚೇತನ ಸಂಘ ಮಂಥನ

ರಾಷ್ಟ್ರ ಚೇತನ ಸಂಘ ಮಂಥನ
ಅನುಭವ ಸಿಹಿ ಸಿಂಚನ || ಪ ||

ದೇಶದೆಲ್ಲೆಡೆ ದಾಸ್ಯ ಭಾವನೆ
ಕಿತ್ತು ಎಸೆಯುವ ಚಿಂತನ
ಎಲ್ಲರೊಂದೇ ಎಂದು ಸಾರುವ
ಮಮತೆ ಕಡಲಿನ ಜೀವನ || 1 ||

ಈ ನಾಡಿನೊಳಗಿರುವವರು ಎಲ್ಲರೂ
ಹಿಂದೂ ಎನ್ನುವ ದೀಪವ
ಎಲ್ಲರ ಎದೆಯೊಳಗೆ ಬೆಳಗಿಸಿ
ಸತ್ಯ ಸಾರುವ ಸಾಧನ || 2 ||

ಎಲ್ಲ ಜೀವಕು ದೈವ ಸ್ಥಾನವ
ನೀಡೋ ನಾಡಿದು ಭಾರತ
ವಿಶ್ವವೇ ಒಂದೆಂದು ಸಾರುವ
ಪರಮ ವೈಭವದಾ ರಥ || 3 ||

Leave a Reply

Your email address will not be published. Required fields are marked *