ರಾಷ್ಟ್ರಜೀವನಕೆ ಮುಡಿಪೀ ದೇಹವು

ರಾಷ್ಟ್ರಜೀವನಕೆ ಮುಡಿಪೀ ದೇಹವು ಮನಮನ ಬೆಸೆಯುವ ಒಂದಾಗಿ

ವೈಭವಶಾಲಿ ರಾಷ್ಟ್ರಕಟ್ಟಲು ದುಡಿಯುವ ನಡೆಯುವ ಒಮ್ಮನದಿ ||ಪಲ್ಲವಿ||

ಜಾತಿ ಭಾಷೆ ಮತ ಪಂಥ ಭೇದಗಳ ತೊಡೆಯುತ ಮುಂದಕೆ ಸಾಗೋಣ

ಭಾವೈಕ್ಯತೆಯಲಿ ಭಾಗಿಗಳಾಗುತ ಭವ್ಯ ಭಾರತವ ಕಟ್ಟೋಣ ||1 ||

ದ್ವೇಷ ಅಸೂಯೆ ಕುಹಕ ವ್ಯಂಗ್ಯಗಳ ಮೂಲೋತ್ಪಾಟನೆ ಮಾಡೋಣ

ಸಮರಸತೆಯಲಿ ಸ್ನೇಹಭಾವದಲಿ ಹರುಷದಿ ರಾಷ್ಟ್ರವ ಕಟ್ಟೋಣ ||2||

ದೀನದುರ್ಬಲರ ಏಳ್ಗೆಗೆ ಸತತವು ಟೊಂಕ ಕಟ್ಟಿ ನಾವ್ ನಿಲ್ಲೋಣ ರಾಷ್ಟ್ರಮಾತೆಯ ಸೇವೆಗೈಯಲು ನಾನೆಂದಿಗು ನಾವಾಗೋಣ ||3||