ದೇಶ ಪ್ರೇಮದ ವೀರಘೋಷಣೆ ಮೊಳಗಲಿ

ದೇಶ ಪ್ರೇಮದ ವೀರಘೋಷಣೆ ಮೊಳಗಲಿ
ನಾಡಿನೊಡಲಿನ ಸುಪ್ತ ಶಕ್ತಿ ಮಿನುಗಲಿ
ಹೊಮ್ಮಲಿ ಹೊರಹೊಮ್ಮತಾ
ಚಿಮ್ಮಲು ಬಾನೆತ್ತರ
ಸಂಘೋದ್ಘೋಷ ಮನದಲಿ ಸಂಘೋದ್ಘೋಷ || ಪ ||

ಕರ್ಮಸಾಧನೆಗೈವ ಹಿಂದು, ಮುಂದೆ ಮುಂದೆ ಸಾಗಲಿ
ಶ್ರೇಷ್ಠವೃತವ ಮನದಲಿರಿಸಿ ದುಷ್ಟಶಕ್ತಿಯ ಮೆಟ್ಟಲಿ
ರುಧಿರವೆಲ್ಲ ಯಜ್ಞದಲ್ಲಿ
ಉರಿದು ಉರಿದು ಹೋಗಲು
ಸಂಘೋದ್ಘೋಷ ಬದುಕಲಿ ಸಂಘೋದ್ಘೋಷ || 1 ||

ಸ್ವಾರ್ಥ ಬದುಕಿನ ಬವಣೆ ನೀಗುತ, ರಾಷ್ಟ್ರ ಭಾವನೆ ಗಳಿಸುತಾ
ಹೆಜ್ಜೆ-ಹೆಜ್ಜೆಗೂ ಸೇವೆಗೈಯುತಾ, ಶತ್ರು ಹೃದಯವೆ ಗೆಲ್ಲುತಾ
ಶಕ್ತಿಯೆಲ್ಲಾ ರಾಷ್ಟ್ರಕಾರ್ಯಕೆ
ಸರ್ವರರ್ಪಣೆಯಾಗಲು
ಸಂಘೋದ್ಘೋಷ ಹೃದಯದಿ ಸಂಘೋದ್ಘೋಷ || 2 ||

ತಾಯಿ ಪಾದಕೆ ನಿತ್ಯ ವಂದಿಪ, ಶರಧಿ ಅಲೆಗಳು ತೆರದಲಿ
ಕಂಠಕಂಠದಿ ಐಕ್ಯ ಸಾರುವ ರಾಷ್ಟ್ರನಾದವೇ ಮೊಳಗಲಿ
ಖೂಳರೆದೆಯು ಬೀರಿಯುವಂತೆ
ಹಿಂದೂ ಏಕತೆ ಬೆಳಗಲು
ಸಂಘೋದ್ಘೋಷ ಅನುದಿನ ಸಂಘೋದ್ಘೋಷ || 3 ||

Leave a Reply

Your email address will not be published. Required fields are marked *

*

code